8:32 PM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಅ.6ರಂದು ಬಹ್ರೇನ್‌ ಕನ್ನಡ ಸಂಘದ ರೊನಾಲ್ಡ್ ಕೊಲಾಸೊ ಲಾಂಜ್‌ ಉದ್ಘಾಟನೆ

05/10/2023, 19:04

ಮಂಗಳೂರು(reporterkarnataka.com): ಬಹ್ರೇನ್ ಇಂಡಿಯನ್ ಕ್ಲಬ್ ಶತಮಾನೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರೊನಾಲ್ಡ್ ಕುಲಾಸೊ ಅವರ ದೊಡ್ಡ ಕೊಡುಗೆಯಲ್ಲಿ ಭಾರತವನ್ನು ಬಿಟ್ಟು ಹೊರಗೆ ಮೊದಲ ಕನ್ನಡ ಭವನವನ್ನು ಬಹ್ರೇನ್‌ನಲ್ಲಿ ನಿರ್ಮಿಸಲಾಗಿದೆ. ಇದು ಏಕೈಕ ಕನ್ನಡ ಭವನ. ಬಹ್ರೇನ್‌ನಲ್ಲಿರುವ ಈ ಕನ್ನಡ ಭವನಕ್ಕೆ ಡಾ ರೊನಾಲ್ಡ್ ಕೊಲಾಸೊ ಅತಿ ದೊಡ್ಡ ದಾನಿ ಆಗಿದ್ದು, ಕನ್ನಡ ಸಂಘದ ನೂತನ ಆಡಳಿತ ಮಂಡಳಿಯ ವಿಧ್ಯುಕ್ತ ಪದಗ್ರಹಣ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿರುವ ರೊನಾಲ್ಡ್‌ ಕುಲಾಸೊ ಲಾಂಜ್‌ ಉದ್ಘಾಟನಾ ಸಮಾರಂಭ ಇದೇ 6ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಕನ್ನಡ ಭವನದಲ್ಲಿನ ನೂತನ ರೊನಾಲ್ಡ್‌ ಕುಲಾಸೊ ಲಾಂಜ್‌ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಮೂವ್‌ ಎನ್‌ ಪಿಕ್‌ ಹೋಟೆಲ್‌ ನಲ್ಲಿ ನೂತನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭ ಹಲವು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಲ್ಲಿನ ಭಾರತೀಯ ರಾಯಭಾರಿ ವಿನೋದ್‌ ಕೆ. ಜಾಕೊಬ್‌ ಮತ್ತು ಅತಿಥಿಗಳಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪಾಲ್ಗೊಳ್ಳಲಿದ್ದಾರೆ.
ಮಂಡ್ಯದ ಶಾಸಕ ರವಿ ಕುಮಾರ್‌ಗೌಡ, ಎಐಸಿಸಿ ಕಾರ್ಯದರ್ಶಿ ಹಾಗೂ ಅನಿವಾಸಿ ಭಾರತೀಯ ಘಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ನಾಡಿನ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್‌ ಕುಲಾಸೊ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮಿಥುನ್‌ ರೈ ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯಗಾರ ಸುಜಯ್‌ ಶಾನಭಾಗ್‌ ಮತ್ತು ತಂಡದಿಂದ ವಿವಿಧ
ನೃತ್ಯ ಪ್ರದರ್ಶನಗಳು ನಡೆಯಲಿವೆ. ಸಂಘದ ಪ್ರತಿಭಾನ್ವಿತ ಕಲಾವಿದರಿಂದ ಪ್ರತಿಭೆ ಅನಾವರಣವಾಗಲಿದೆ. ಸಂಘದ ಎಲ್ಲ ಸದಸ್ಯರು‌ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಟುಂಬದ ಜತೆಗೆ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಅಮರನಾಥ್‌ ರೈ ತಿಳಿಸಿದ್ದಾರೆ.
ಡಾ. ರೊನಾಲ್ಡ್ ಕೊಲಾಸೊ ಅವರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದ್ದಾರೆ, ಇದನ್ನು ಬ್ರಿಟಿಷ್ ಸಂಸತ್‌ ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಘೋಷಿಸಲಾಗಿದೆ. ಅವರು ರಾಜ್ಯ ಸರ್ಕಾರಕ್ಕೆ ನೀಡಿದ ಸಾಮಾಜಿಕ, ದತ್ತಿ ಕಾರ್ಯ ಮತ್ತು ಮೂಲಸೌಕರ್ಯಕ್ಕೆ ನೀಡಿದ ಸಾಧನೆ ಗುರುತಿಸಿ “ದಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್” ಅನ್ನು ನೀಡಲಾಗಿದೆ ಎಂದರು.
ಲಂಡನ್‌ 5 ಬಾರಿ ಸಂಸದರಾಗಿರುವ ಡಾ. ವೀರೇಂದ್ರ ಶರ್ಮಾ ಅವರು ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಪ್ರದಾನ ಮಾಡಿದ ಶ್ರೇಷ್ಠತೆ ಪ್ರಮಾಣ ಪತ್ರಕ್ಕೆ ಸಹಿ ಹಾಕಿದವಲ್ಲಿ ಇವರು ಕೂಡ ಒಬ್ಬರು, 2024 ರ ಜ. 6ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ಪತ್ರ ನೀಡಲು ಖುದ್ದು ಬಂದಿದ್ದರು. ಥೈಲ್ಯಾಂಡ್‌ನ ಬ್ಯಾಂಕಾಂಕ್‌ ನಲ್ಲಿ 2022 – 23 ನೇ ಸಾಲಿನ ಏಷ್ಯಾಒನ್ ಗ್ಲೋಬಲ್ ಇಂಡಿಯನ್ ,
ಪ್ರಶಸ್ತಿ ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ತಿಳಸಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ನೋಬಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಪೆಪ್ಸಿ ಸಿಇಒ ಇಂದ್ರಾ ನೂಯಿ, ರಿಲಯನ್ಸ್ ಫೌಂಡೇಷನ್‌ ಅಧ್ಯಕ್ಷೆ ನೀತಾ ಅಂಬಾನಿ, ಬ್ಯಾಂಕಾಂಕ್‌ನ ಮ್ಯಾರಿಯೆಟ್ ಮಾರ್ಕ್ವಿಸ್ ಹೋಟೆಲ್‌ನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರ ಜತೆಗೆ ಥೈಲ್ಯಾಂಡ್‌ ಸೇರಿದಂತೆ ವಿವಿಧ ದೇಶಗಳ 20ಕ್ಕೂ ಹೆಚ್ಚು ರಾಯಭಾರಿಗಳು ಭಾಗವಹಿಸಿದ್ದರು ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು