10:49 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಆಗಸ್ಟ್ 30: ಕ್ಲಬ್ ಹೌಸ್ ನಲ್ಲಿ ಮೊದಲ ಬಾರಿಗೆ ಹಿಂದೂ ಸಮಾವೇಶ: ಡಾ. ಪ್ರಭಾಕರ್ ಭಟ್ ನೇತೃತ್ವ

27/08/2021, 20:55

ಮಂಗಳೂರು(reporterkarnataka.com) ಟೀಮ್ ಹಿಂದುತ್ವ ಆಶ್ರಯದಲ್ಲಿ  ಕ್ಲಬ್ ಹೌಸ್ ನ ಹಿಂದುತ್ವ ಕ್ಲಬ್ ನಲ್ಲಿ (ಪೇಜ್ ನಲ್ಲಿ) “ಹಿಂದೂ ಸಮಾವೇಶ” ಆಯೋಜಿಸಲಾಗಿದೆ. ಇದೇ ಆಗಸ್ಟ್ 30 ರಂದು ರಾತ್ರಿ 7.30ಕ್ಕೆ ನಡೆಯಲಿದೆ. ಕ್ಲಬ್ ಹೌಸ್ ನಲ್ಲಿ ಇದು ಮೊದಲ ಪ್ರಯತ್ನವಾಗಿದೆ. 

ಕ್ಲಬ್ ಹೌಸ್ ನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಅದೆಷ್ಟು ಕಿವಿಗಳು ಸಾಕ್ಷಿಯಾಗಬಲ್ಲವೋ ಗೊತ್ತಿಲ್ಲ. ಆದರೆ ಕೌತುಕವನ್ನಂತೂ ಇದು  ಸೃಷ್ಟಿ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವ ವಹಿಸಲಿದ್ದಾರೆ. ಹಿಂದೂ ಸಮಾಜದ ಏಳಿಗೆ ಮತ್ತು ಏಳು- ಬೀಳು ಹಾಗೂ ಮುಂದಿನ ಭವಿತವ್ಯದ ಕುರಿತು  ಡಾ. ಭಟ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜತೆಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಅಂಕಣಕಾರ ರೋಹಿತ್ ಚಕ್ರತೀರ್ಥ ನಡೆಸಿಕೊಡಲಿದ್ದಾರೆ. 

ಗಾಯಕಿ ರಮ್ಯ ವಸಿಷ್ಟ ಅವರಿಂದ ಪ್ರಾರ್ಥನೆ ಮತ್ತು ವಂದೇ ಮಾತರಂ ಗಾಯನ ನಡೆಯಲಿದೆ. ಒಟ್ಟಿನಲ್ಲಿ 30ರಂದು ಕ್ಲಬ್ ಹೌಸಿನ ಹಿಂದೂ ಸಮಾವೇಶ ಹೊಸದೊಂದು ಸಂಚಲನ ಹುಟ್ಟಿಸುವಲ್ಲಿ ದಾಪುಗಾಲಿಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು