ಇತ್ತೀಚಿನ ಸುದ್ದಿ
ಅತ್ಯಾಚಾರ ಪ್ರಕರಣ: 8 ವರ್ಷದ ಬಳಿಕ ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ದೋಷಮುಕ್ತಿ
21/05/2021, 14:17

ಗೋವಾ(reporterkarnataka news) : ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದ ತಹಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅವರನ್ನು ನಿರ್ದೋಷಿ ಎಂದು ಗೋವಾದ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಸುಮಾರು 8 ವರ್ಷಗಳ ಹಿಂದೆ ತೇಜ್ ಪಾಲ್ ವಿರುದ್ಧ ಸಹದ್ಯೋಗಿ ಮಹಿಳೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2013 ರಲ್ಲಿ ತೆಹಲ್ಕಾ ಗೋವಾದ ಪಂಚತಾರಾ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ವೇಳೆ ಲಿಫ್ಟ್ ನೊಳಗೆ ತನ್ನ ಸಹದ್ಯೋಗಿಯೊಬ್ಬರಿಗೆ ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ತೀರ್ಪು ನೀಡಿರುವ ಗೋವಾ ಸೆಷನ್ಸ್ ನ್ಯಾಯಾಲಯ ತೇಜ್ ಪಾಲ್ ಅವರು ನಿರ್ದೋಷಿ ಎಂದು ಆದೇಶ ನೀಡಿದೆ.