ಇತ್ತೀಚಿನ ಸುದ್ದಿ
ಅಥಣಿಯಲ್ಲಿ ನವರಾತ್ರಿ ದುರ್ಗಾಮಾತಾ ಪೂಜೆ: ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಂಬಂಧ ಬೆಸೆಯುವ ಬನ್ನಿ ಹಬ್ಬ ಆಚರಣೆ
25/10/2023, 16:51

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ನವರಾತ್ರಿ ದಸರಾ ಹಬ್ಬದ ಅಂಗವಾಗಿ ಅಥಣಿ ಪಟ್ಟಣದ ಶ್ರೀ ಹನುಮಾನ ಮಂದಿರದ ಸಮೀಪದಲ್ಲಿ ಶ್ರೀ ದುರ್ಗಾಮಾತಾ ಪೂಜೆ ಸಮಾರಂಭ ನಡೆಯಿತು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ
ಸವದಿ ಅವರು ಪಾಲ್ಗೊಂಡು ಪೂಜೆ, ಪ್ರಾರ್ಥನೆ ನೆರವೇರಿಸಿದರು.
ನಾಡಿನ ಸಮಸ್ತ ಜನತೆಗೆ ದಸರಾ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು. ಈ ಶುಭ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ, ದುರ್ಗಾಮಾತೆ ಸರ್ವರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪುರಸಭೆ ಸದಸ್ಯರಾದ ರಾಜು ಬುಲಬುಲೆ, ಸಂತೋಷ ಸಾವಡಕರ, ಮುಖಂಡರಾದ ದಿಲೀಪ ಲೋನಾರಿ, ರಾಮನಗೌಡ ಪಾಟೀಲ, ನಿತೀನ ಗೋಂಗಡೆ, ವಿಜಯಸಿಂಗ್ ರಜಪೂತ* ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ನಾವು ನೀವು ಬಂಗಾರದ್ಹಾಂಗಿರೋಣ್ರೀ: ದಸರಾ, ವಿಜಯದಶಮಿ, ಸಂಬಂಧ ಬೆಸೆಯುವ ಬನ್ನಿ ಹಬ್ಬದ ನಿಮಿತ್ಯ ಶಾಸಕ ಲಕ್ಷ್ಮಣ
ಸವದಿ ಅವರನ್ನು ಅಥಣಿ
ಕ್ಷೇತ್ರದ ವಿವಿಧ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಭೇಟಿ ಮಾಡಿ ಪರಸ್ಪರ ಬನ್ನಿ ಕೊಟ್ಟು “ನಾವು ನೀವು ಬಂಗಾರದ್ಹಾಂಗಿರೋಣ್ರೀ”..ಎಂದು ಹಬ್ಬದ ಶುಭಾಶಯ ಕೋರಿದರು.