7:25 AM Friday28 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಅಥಣಿಯ ಶೇಗುಣಸಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ: ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ

22/01/2023, 14:02

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಈ ತಿಂಗಳಿನ 21ರಿಂದ ಆರಂಭಗೊಂಡ 9 ದಿನಗಳ ಕಾಲದ ವಿಜಯ ಸಂಕಲ್ಪ ಯಾತ್ರೆಗೆ ಅಥಣಿ ತಾಲೂಕಿನ ಶೇಗುಣಸಿಯಲ್ಲಿ ಚಾಲನೆ ನೀಡಲಾಯಿತು.

ಪ್ರತಿ ಮನೆ ಮನೆಗೆ ಕರಪತ್ರ ಕೊಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆ ಹಾಗೂ ಅಭಿವೃದ್ದಿ ಕಾರ್ಯಗಳ ಮಾಹಿತಿ ಕೊಡಲಾಗಿದೆ, ಸ್ಟಿಕರ್ ಪ್ರತಿ ಮನೆ ಮನೆಗೆ ಹಚ್ಚಿ ಬಿಜೆಪಿ ಅಭಿಯಾನ ಉಂಟು ಮಾಡಬೇಕು, ಗೋಡೆ ಬರಹ ಬರೆಯಬೇಕು, ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 10 ಗೋಡೆ ಬರಹ ಬರೆಯಬೇಕು, 29 ರಂದು ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮವಿದೆ ಆ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡುವಂತೆ ಪ್ರೇರೆಪಿಸಲಾಗುವುದು ಎಂದು ಬಿಜೆಪಿ ಅಥಣಿ ಮಂಡಳ ವಿಸ್ತಾರಕ ಅರ್ಜುನ ಪವಾರ ಅವರು ಹೇಳಿದ್ದಾರೆ.
ಅವರು ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಅನಂತರ ಶಾಸಕ ಮಹೇಶ ಕುಮಠಳ್ಳಿ ಅವರು ಮಾತನಾಡುತ್ತಾ ಬರುವ 29 ರ ಪ್ರಧಾನಿಯವ ಕಾರ್ಯಕ್ರಮ ವೀಕ್ಷಿಸಿ , ಜೊತೆಗೆ ಬಿಜೆಪಿಯ ಕಾರ್ಯಸಾಧನೆಗಳನ್ನು ಪ್ರತಿಯೋರ್ವ ಜನರಿಗೆ ತಿಳಿಸಿಕೊಡುವ ಕಾರ್ಯ ಎಲ್ಲ ಕಾರ್ಯಕರ್ತರು ನಡೆಸಿಕೊಡಬೇಕು. ಈ ಮೂಲಕ ದೇಶವನ್ನು ಸುಬಧ್ರವಾಗಿ ಕಟ್ಟಿಕೊಡುವುದನ್ನು ಕಾರ್ಯಕರ್ತರು ಮಾಡಬೇಕು, 2023 ರ ಚುನಾವಣೆಯ ಪೂರ್ವಭಾವಿಯಾಗಿ ಹಲವಾರು ಯೋಜಮೆ ಹಾಕಿಕೊಂಡಿದ್ದು ಅವೆಲ್ಲವುಗಳ ಮಾಹಿತಿ ಜನರಿಗೆ ಮುಟ್ಟಿಸುವುದಾಗಿದೆ ಎಂದರು.

ಈ ವೇಳೆ ನಿಂಗಪ್ಪ ನಂದೇಶ್ವರ, ಕಲ್ಮೇಶ ಯಲಡಗಿ, ಶಿವಪುತ್ರ ನಾಯಿಕ, ರಾಜು‌ ಮರಡಿ, ಬಸವರಾಜ ಮಗದುಮ್, ವಿವೇಕ ನಾರಗೊಂಡ, ಕುಮಾರ ಸತ್ತಿಗೌಡರ, ಲಕ್ಷ್ಮಣ ಆಲೂರ, ಅಶೋಕ ಅಮ್ಮಣಗಿ, ವೆಂಕಟೇಶ ದೇಶಪಾಂಡೆ ಸೇರಿದಂತೆ ಇತರರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು