ಇತ್ತೀಚಿನ ಸುದ್ದಿ
‘ಅಸಾನಿ’ ಚಂಡಮಾರುತ ಅಬ್ಬರ, ಆಂಧ್ರಪ್ರದೇಶ ತತ್ತರ: 10 ವಿಮಾನಗಳ ಹಾರಾಟ ರದ್ದು
10/05/2022, 22:01
ಹೈದರಾಬಾದ್( reporterkarnataka.com) ಅಸಾನಿ ಚಂಡಮಾರುತದ ಅಬ್ಬರ ನೆರೆಯ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆ ಸಂಜೆ ಬಲವಾದ ಗಾಳಿ ಮಳೆ ಸುರಿದಿದೆ. ಶ್ರೀಕಾಕುಳಂ ಜಿಲ್ಲೆಯ ಕೆಲ ಭಾಗಗಳಲ್ಲಿ ನಿನ್ನೆ ಸಂಜೆ ಭಾರಿ ಗಾಳಿ ಹಾಗೂ ಭಾರೀ ಮಳೆಯಾಗಿದೆ. 10 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ಅಸಾನಿ ಚಂಡಮಾರುತದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಮತ್ತು ಮುಂಬೈ ಸೇರಿದಂತೆ 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ನಿನ್ನೆಯೇ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿತ್ತು. ಕಡಲ ತೀರಗಳಲ್ಲಿ ಮತ್ತಷ್ಟು ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ ಹಾಗಾಗಿ ವಿಶಾಖಪಟ್ಟಣಂ ಬೀಚ್‌ಗೆ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.