4:13 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ನಂಜನಗೂಡು: ವಿಚಿತ್ರ ರೂಪದ ಮಗು ಜನನ; ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ

05/02/2025, 17:17

*ದಂಪತಿಗೆ ಎರಡನೇ ಬಾರಿಗೂ ಇದೇ ರೀತಿ ಮಗು ಜನನ ಆತಂಕದಲ್ಲಿ ಕುಟುಂಬ...*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ವೈದ್ಯ ಲೋಕವನ್ನೇ ಬೆರಗಾಗುವಂತಹ ರೂಪ ಹೊಂದಿದ ಅಪರೂಪದ ಮಗುವೊಂದು ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ.
ಹುಟ್ಟಿದ ಮಗು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ. ವಿಚಿತ್ರವಾದ ಕಣ್ಣು ಮತ್ತು ತುಟಿ, ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣ.ನೋಡುಗರನ್ನ ಬೆಚ್ಚಿಬೀಳುವಂತಹ ವಿಚಿತ್ರ ಮಗು ಹುಟ್ಟುವ ಮೂಲಕ ಆರೋಗ್ಯ ಇಲಾಖೆಯನ್ನ ಹುಬ್ಬೇರುವಂತೆ ಮಾಡಿದೆ.
ಹುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಗ್ರಾಮ ಒಂದರ ದಂಪತಿಗೆ ಇಂತಹ ರೂಪ ಹೊಂದಿರುವ ಮಗು ಹುಟ್ಟಿದೆ.
ಮಗುವಿನ ಆಕಾರ ಮತ್ತು ರೂಪಕ್ಕೆ ಗ್ರಾಮಸ್ಥರು ಮತ್ತು ದಂಪತಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಮಗುವನ್ನು ಉಳಿಸಿಕೊಳ್ಳಲು ಹುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.
ವಿಚಿತ್ರ ರೂಪದ ಮಗುವನ್ನ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏಳು ದಿನಗಳ ಕಾಲ ತುರ್ತು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವಷ್ಟೇ ಇದೇ ದಂಪತಿ ಇಂತದ್ದೇ ರೂಪ ಹೊಂದಿದ ಮಗುವಿಗೆ ಜನ್ಮ ನೀಡಿದ್ದರು ಎಂದು ತಿಳಿದು ಬಂದಿದ್ದು ನಾಲ್ಕೈದು ದಿನಗಳ ನಂತರ ಸಾವನ್ನಪ್ಪಿತ್ತು ಎನ್ನಲಾಗಿದೆ. ಮತ್ತೆ ಈ ಬಾರಿಯೂ ಕೂಡ ಇದೇ ರೀತಿ ಇಡೀ ಕುಟುಂಬವನ್ನು ಬೆಚ್ಚಿ ಬೀಳಿಸುವಂತಹ ವಿಚಿತ್ರ ಮಗು ಈ ದಂಪತಿಗೆ ಹುಟ್ಟಿದೆ.
ಈ ಹಿಂದೆ ನಡೆದ ಪ್ರಕರಣದ ನಂತರ ಆರೋಗ್ಯ ಇಲಾಖೆ ನೀಡಿದ್ದ ಸಲಹೆ ಸೂಚನೆಗಳನ್ನ ದಂಪತಿ ಪಾಲಿಸಿಲ್ಲ ಎಂದು ಹೇಳಲಾಗಿದ್ದು ಮಗುವನ್ನ ಉಳಿಸಿಕೊಳ್ಳಲು ಚೆಲುವಂಬಾ ಆಸ್ಪತ್ರೆಯ ತುರ್ತು ಘಟಕದಲ್ಲಿರಿಸಿ ಹರಸಾಹಸ ನಡೆಸಲಾಗುತ್ತಿದೆ.
ಇಂತಹ ವಿಸ್ಮಯವಾದ ಮಗು ಹುಟ್ಟುವ ಮೂಲಕ ವೈದ್ಯಲೋಕಕ್ಕೆ ಸವಾಲು ಎನ್ನುವಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು