ಇತ್ತೀಚಿನ ಸುದ್ದಿ
Chikkamagaluru | ಮೂಡಿಗೆರೆ ಮತ್ತಿಕಟ್ಟೆ ಸಮೀಪ ಶ್ವಾನ ದಾಳಿ: ಗಾಯಗೊಂಡಿದ್ದ ಜಿಂಕೆ ಸಾವು
05/11/2025, 22:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಮತ್ತಿಕಟ್ಟೆ ಸಮೀಪ ನಾಯಿ ಅಟ್ಟಾಡಿಸಿ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ರಕ್ಷಿಸಿದರೂ, ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಘಟನೆಯ ನಂತರ ಸಮಾಜಸೇವಕ ಅರೀಫ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಯಗೊಂಡ ಜಿಂಕೆಯನ್ನು ಸುರಕ್ಷಿತವಾಗಿ ಹಿಡಿದು ಪಶು ಚಿಕಿತ್ಸಾಲಯಕ್ಕೆ ಕರೆತಂದಿದ್ದರು. ಪಶು ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ, ಜಿಂಕೆಯ ಗಾಯಗಳು ಗಂಭೀರವಾಗಿದ್ದರಿಂದ ಅದು ಪ್ರಾಣ ಉಳಿಸಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.
ಜಿಂಕೆಯನ್ನು ರಕ್ಷಿಸಲು ತೋರಿದ ಸಮಾಜಸೇವಕ ಅರೀಫ್, ಸ್ಥಳೀಯರು ಹಾಗೂ ಅರಣ್ಯ ಅಧಿಕಾರಿಗಳ ಮಾನವೀಯ ಕಾರ್ಯ ಶ್ಲಾಘನೀಯ.












