1:47 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ನಂಜನಗೂಡು: ಅಯ್ಯಪ್ಪ ಸ್ವಾಮಿ ಉತ್ಸವ, ಬೃಹತ್ ಅನ್ನ ಸಂತರ್ಪಣೆ

21/12/2024, 13:01

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಚಿಕ್ಕ ಶಬರಿಮಲೆ ಎಂದೇ ಕರೆಯಲ್ಪಡುವ ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಪವಿತ್ರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ 27ನೇ ಬ್ರಹ್ಮೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿಯವರ ಮೆರವಣಿಗೆ ಹಾಗೂ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮವು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ತಂದ ಅಲಂಕೃತ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಕುದುರೆ ಸಾರೋಟು ಮಾದರಿಯಲ್ಲಿರುವ ಮಂಟಪದಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಗುರುಸ್ವಾಮಿಗಳು ಕರ್ಪೂರ ಹಚ್ಚಿ ಈಡು ಗಾಯಿ ಹೊಡೆದು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಮೆರವಣಿಗೆಯಲ್ಲಿ ಮಂಗಳವಾದ್ಯ, ಕೇರಳದ ಪ್ರಸಿದ್ಧ ಚಂಡೇವಾದ್ಯ, ತಮಟೆ ವಾದ್ಯ, ಬ್ಯಾಂಡ್ ವಾದನ,ವೀರಗಾಸೆ ಕುಣಿತ, ಪೂಜಾ ಕುಣಿತ, ನವಿಲು ಕುಣಿತ, ಹುಲಿ ವೇಷ, ಗಾರುಡಿಗೊಂಬೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯಲ್ಲಿ ಮೆರುಗು ತಂದವು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಯಿಂದಲೇ ಬೃಹತ್ ಅನ್ನ ಸಂತರ್ಪಣೆ ಪ್ರಾರಂಭವಾಗಿ ಸಂಜೆ ಐದು ಗಂಟೆವರೆಗೂ ಸುಮಾರು 10,000ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ದೇವಾಲಯದ ವತಿಯಿಂದ ದೊಡ್ಡ ದೊಡ್ಡ ಕೊಪ್ಪರಿಕೆಗಳಲ್ಲಿ ಅನ್ನ, ಸಾಂಬಾರ್, ಹುಳಿ, ಪಾಯಸ, ರೈಸ್ ಬಾತ್, ಬೋಂದಿ ಪ್ರಸಾದವನ್ನು ತಯಾರು ಮಾಡಲಾಗಿತ್ತು.
ತಯಾರಾದ ಬೃಹತ್ ಪ್ರಸಾದಕ್ಕೆ ಸುಕ್ಷೇತ್ರ ಶ್ರೀ ಮಲ್ಲನ ಮೂಲೆಮಠದ ಕಿರಿಯ ಶ್ರೀಗಳು ಸೇರಿದಂತೆ ದೇವಾಲಯದ ಗುರುಸ್ವಾಮಿ ಗಳು ಪೂಜೆ ಸಲ್ಲಿಸಿದರು.
ಬಳಿಕ ಗುರುಸ್ವಾಮಿ ಗಳಾದ ದೇವರಾಜಸ್ವಾಮಿಗಳು ಸೇರಿದಂತೆ ಕೆಲವು ದಾನಿಗಳು ಭಕ್ತರಿಗೆ ಸಿಹಿ ಬಡಿಸುವ ಮೂಲಕ ಬೃಹತ್ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ನಂಜನಗೂಡು ಪಟ್ಟಣವು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಸಾವಿರಾರು ಅಯ್ಯಪ್ಪ ಭಕ್ತರು ಅನ್ನ ಸಂತರ್ಪಣೆ ಹಾಗೂ ಮೆರವಣಿಗೆ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಭಕ್ತಿ ಭಾವ ಮೆರೆದರು.
ಬಳಿಕ ಗುರುಸ್ವಾಮಿಗಳಾದ ದೇವರಾಜ ಸ್ವಾಮಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿ ಇಂದು ದೇವಾಲಯದಲ್ಲಿ ಬೃಹತ್ ಅನುಸಂಪರ್ಪಣೆ ನಡೆದು ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲವು ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯವರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಲಾಗುವುದು. ಮೆರವಣಿಗೆ ಮುಗಿದ ಬಳಿಕ ಸಾಯಂಕಾಲ ಕಪಿಲಾ ನದಿಯಲ್ಲಿ ಸ್ವಾಮಿಯವರ ತೆಪ್ಪೋತ್ಸವವು ನಡೆಯಲಿದೆ. ಹಾಗೆಯೇ 24ರಂದು ಮೈಸೂರಿನಿಂದ ನಂಜನಗೂಡಿಗೆ ಪಾದಯಾತ್ರೆ, ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು