5:41 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು