7:44 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಮೇ 25-28: ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ‘ದೇವತಾ’ ಆಕ್ರಿಲಿಕ್ ಕಲಾಕೃತಿ ಪ್ರದರ್ಶನ

22/05/2023, 22:51

ಉಡುಪಿ(reporterkarnataka.com): ಸುಮಾರು 70 ಮತ್ತು 80ರ ದಶಕದಲ್ಲಿ ಮನೆಯ ಚಾವಡಿಯ ಗೋಡೆ ತುಂಬಾ ದೇವ- ದೇವತೆಗಳ ಕ್ಯಾಲೆಂಡರ್ ರಾರಾಜಿಸುತ್ತಿತ್ತು. ಇದೀಗ ಗೋಡೆ ತುಂಬಾ ಫೋಟೋ, ಕ್ಯಾಲೆಂಡರ್ ಹಾಕುವುದು ಔಟ್ ಆಫ್ ಫ್ಯಾಶನ್. ಹಾಗಾಗಿ ದೇವ- ದೇವತೆಗಳ ಫೋಟೋ ಕಾಣಸಿಗುವುದು ಬಹಳ ಅಪರೂಪ. ಆದರೆ ಮೇ 25ರಿಂದ 4 ದಿನಗಳ ಕಾಲ ಇಂತಹ ಅವಕಾಶ ಸಾರ್ವಜನಿಕರಿಗೆ ಲಭಿಸಲಿದೆ. ಇಲ್ಲಿ ಕುಂಜಿಬೆಟ್ಟು ಅದಿತಿ ಆರ್ಟ್ ಗ್ಯಾಲರಿಯಲ್ಲಿ ದೇವ- ದೇವತೆಗಳ ಸಮಾಗಮ ನಡೆಯಲಿದೆ.
ದೇವ ದೇವತೆಯರ ಕುರಿತಾಗಿ ರಚಿಸಿದ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ ” ದೇವತಾ ” ಮೇ 25 ರಿಂದ ಮೇ 28 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ. ಮಂಗಳವಾರ ಅದಿತಿ ಗ್ಯಾಲರಿಯಲ್ಲಿ ಜರಗಿದ ಸುದ್ದಿಗೋಷ್ಟಿಯಲ್ಲಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಮಾಹಿತಿ ನೀಡಿದರು.
ಹಿರಿಯ ಕಲಾವಿದರ ಪ್ರೇರಣೆ ಪಡೆದ ಪ್ರವೀಣಾ ಮೋಹನ್ ಅವರು ತಮ್ಮ ಶೈಲಿಯಲ್ಲಿ ಸುಮಾರು 24ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಿದ್ದಾರೆ.
ಮೇ 25ರಂದು ಸಂಜೆ 5 ಕ್ಕೆ ಮೂಡಬಿದ್ರೆ ಆಳ್ವಾಸ್ ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಉಜ್ವಲ್ ಸಮೂಹದ ಆಡಳಿತ ನಿರ್ದೇಶಕರಾದ ಅಜೆಯ್ ಪಿ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್ ನ ಮಾಲಕರಾದ ನರೇಂದ್ರ ಶೆಣೈ ಸ್ಮರಿಣಿಕೆ ಸ್ಟಿಕ್ಕರ್ ಬಿಡುಗಡೆ ಮಾಡಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು.


ಕಲಾವಿದೆ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.
ಪ್ರದರ್ಶನವು ಮೇ 26 ರಿಂದ ಮೇ 27 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ.
ಶೇ. 50 ರಿಯಾಯಿತಿಯಲ್ಲಿ ಆಸ್ಟ್ರೋ ಪುಸ್ತಕಗಳು ಲಭ್ಯ: ದೇವತಾ ಚಿತ್ರ ಕಲಾ ಪ್ರದರ್ಶನದ ಅಂಗವಾಗಿ ಆಸ್ಟ್ರೊ ಮೋಹನ್ ಅವರ ಎರಡು ಪಿಕ್ಟೊರಿಯಲ್ ಜರ್ನಿ ಟು ಉಡುಪಿ – ಮಣಿಪಾಲ ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕುರಿತಾಗಿ ಹೊರತಂದ ಪುಸ್ತಕ ಎ ಡೇ ವಿತ್ ದಿ ಸೈನ್ಟ್ ಕೃತಿಗಳು ಶೇ. 50 ರಿಯಾಯಿತಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಕಲಾವಿದರ ಕುರಿತು: ಪ್ರವೀಣಾ ಮೋಹನ್ ಬಾಲ್ಯದಿಂದಲೇ ಬಣ್ಣಗಳ ಮೇಲಿದ್ದ ಮೋಹ ಪ್ರಬುದ್ಧ ಕಲಾವಿದೆಯನ್ನಾಗಿಸಿದೆ. ಸಾಂಪ್ರದಾಯಿಕ ಚಿತ್ರಗಳಿಗೆ ಆಧುನಿಕ ಸ್ಪರ್ಶ ನೀಡುವ ಪ್ರವೀಣಾ ಅವರ ಕಲಾ ಕೈಗಳ ಮೋಡಿಗೆ ಮಾರುಹೋಗದವರೇ ಇಲ್ಲ . ರೇಖಾಚಿತ್ರ , ಜಲವರ್ಣ , ಚಾರ್ಕೋಲ್ , ಫ್ಯಾಬ್ರಿಕ್ , ಪಾಟ್ ಪೇಂಟಿಂಗ್, ಚುಕ್ಕೆ ಚಿತ್ರ ,ಎಕ್ರಲಿಕ್, ಲೋಹ ಉಬ್ಬುಶಿಲ್ಪ ಹೀಗೆ ಹತ್ತು ಹಲವು ಮಾದ್ಯಮದಲ್ಲಿ ಪ್ರವೀಣಾ ಪ್ರವೀಣೆ.
ಕಲಾಕೃತಿ ರಚನೆಗೆ ಸೀಮಿತವಾಗದ ಪ್ರವೀಣಾ ಮೋಹನ್ ಓರ್ವ ಪ್ರಬುದ್ಧ ಭರತನಾಟ್ಯ ಕಲಾವಿದೆ. ರಾಜ್ಯದ ವಿವಿಧ ಕಲಾ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ವಿವಾಹೋತ್ತರ ಭರತನಾಟ್ಯದಲ್ಲಿ ವಿದುಷಿ ಪದವಿ ಪ್ರಾಪ್ತಿಸಿಕೊಂಡ ಸಾಧಕಿ. ನೃತ್ಯ ಮತ್ತು ಚಿತ್ರಕಲೆಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದುಕೊಡುತ್ತಿರುವ ಕಲಾ ಶಿಕ್ಷಕಿಯೂ ಹೌದು. ಕೆಲ ಸಮಯ ಕ್ಯಾಮ್ಲಿನ್ ಕಂಪೆನಿಗೆ ಕಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಕಲಾ ಪ್ರದರ್ಶನವನ್ನು ನಡೆಸಿರುವ ಇವರ ಕಲಾಕೃತಿಗಳು ವಿದೇಶದಲ್ಲಿರುವ ಭಾರತೀಯರ ಮನೆಯಲ್ಲಿ ಆಶ್ರಯ ಪಡೆದಿವೆ. ಉಡುಪಿ ಎಂಜಿಎಂ ಕಾಲೀಜಿನ ಸ್ವರ್ಣ ಮಹೋತ್ಸವದ ಲಾಂಛನ ನಿರ್ಮಾಣ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.
ಕಲಿಕೆಗೆ ವಯೋಮಿತಿ ಇಲ್ಲವೆಂಬ ಮಾತನ್ನು ಎತ್ತಿ ಹಿಡಿದ ಪ್ರವೀಣಾ ಮೋಹನ್ ಪರ್ಷಿಯನ್ ಮತ್ತು ತಂಜಾವೂರು ಕಲಾ ರಚನೆಯ ಸೂಕ್ಷ್ಮಗಳನ್ನು ಕಳಿತು ಈಗಾಗಲೇ ತನ್ನ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ನೀಡುತ್ತಿದ್ದಾರೆ.


ಇವರ ಕಲಾವಂತಿಕೆಯನ್ನು ಕಂಡ ಅನೇಕ ಸಂಘ ಸಂಸ್ಥೆಗಳು ವಿಶೇಷ ಪುರಸ್ಕಾರಗಳನ್ನು ನೀಡಿ ಪುರಸ್ಕರಿಸಿವೆ. ಇತ್ತೀಚೆಗೆ ಉಪಾಧ್ಯಾಯ ಸಮ್ಮಾನ್ ಪ್ರಶಸ್ತಿಯೂ ಇವರ ಮಡಿಲು ಸೇರಿದೆ. ಪ್ರವೀಣಾ ಮೋಹನ್ , ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಪತ್ನಿ.

ಇತ್ತೀಚಿನ ಸುದ್ದಿ

ಜಾಹೀರಾತು