11:54 AM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಬ್ರಹ್ಮಾವರ: ಕಾರಿನ ಹಿಂಬದಿ ಸೀಟಿನಲ್ಲಿಟ್ಟಿದ್ದ 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

04/02/2023, 13:25

ಬ್ರಹ್ಮಾವರ(reporterkarnataka.com): ಸ್ಕೂಲ್ ಬ್ಯಾಗ್ ನಲ್ಲಿ ಹಾಕಿ ಕಾರಿನ ಹಿಂಬದಿ ಸೀಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಬ್ರಹ್ಮಾವರದ ಹೊನ್ನಾಳದಲ್ಲಿ ನಡೆದಿದೆ.

ಹೂಡೆಯ ಆಫ್ರೀನ್‌ ಬಾನು ಎಂಬವರು ಚಿನ್ನಾಭರಣ ಕಳೆದುಕೊಂಡ ಮಹಿಳೆ. ಇವರು ಜ. 28 ಮತ್ತು 29 ರಂದು ಹೊನ್ನಾಳದಲ್ಲಿ ಸಂಬಂಧಿಕರ ಮದುವೆಯ ಸಮಾರಂಭಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಜ.30ರಂದು ಹೂಡೆಯಲ್ಲಿರುವ ಗಂಡನ ಮನೆಗೆ ಹೊರಟಿದ್ದರು. ಮೈದುನ ಫರಾಜ್‌ ತೋನ್ಸೆ ಅವರನ್ನು ಬರಲು ಹೇಳಿದಂತೆ, ಅವರು ಮಾರುತಿ 800 ಕಾರನ್ನು ತಂದಿದ್ದರು.

ಆಫ್ರೀನ್ ಅವರು ಮದುವೆಗೆಂದು ಲಾಕರ್‌ನಿಂದ ತಂದಿದ್ದ ನೂರಾ ಎಂಬತ್ತೂವರೆ ಗ್ರಾಂ ತೂಕದ ಚಿನ್ನಾಭರಣಗಳನ್ನು ಬೆನ್ನಿಗೆ ಹಾಕುವ ಸ್ಕೂಲ್‌ ಬ್ಯಾಗ್‌ನಲ್ಲಿರಿಸಿ, ಅದನ್ನು ಕಾರಿನ ಹಿಂಬದಿ ಸೀಟಿನಲ್ಲಿ ದೊಡ್ಡ ಲಗ್ಗೇಜ್‌ ಬ್ಯಾಗಿನ ಮೇಲಿಟ್ಟಿದ್ದರು. ಈ ವೇಳೆ ತಾಯಿ ಚಾ ಕುಡಿಯಲು ಕರೆದಿದ್ದು, ಆಗ ಆಫ್ರೀನ್ ಹಾಗೂ ಮೈದುನ ಮನೆಯೊಳಗೆ ಹೋಗಿ ಚಾ ಕುಡಿದು ಬಂದಿದ್ದರು. ಬಳಿಕ ಅಲ್ಲಿಂದ ಹೊರಟು ಹೊಡೆಗೆ ಬಂದು, ಲಾಗೇಜುಗಳನ್ನು ಮನೆಯೊಳಗಿಟ್ಟಿದ್ದರು. ಬಳಿಕ ಸಂಜೆ ಬ್ಯಾಗನ್ನು ಓಪನ್‌ ಮಾಡಿ ನೋಡಿದಾಗ ಅದರಲ್ಲಿಟ್ಟಿದ್ದ 7.26 ಲಕ್ಷ ರೂ. ಮೌಲ್ಯದ 180 ½ (ನೂರಾ ಎಂಬತ್ತೂವರೆ) ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದ್ದವು. ಯಾರೋ ಕಳ್ಳರು ಕಾರಿನಲ್ಲಿ ಇರಿಸಿದ್ದ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಇತ್ತೀಚಿನ ಸುದ್ದಿ

ಜಾಹೀರಾತು