12:00 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ವೇದಾವತಿ ನದಿಯ ಚೆಕ್ ಡ್ಯಾಂ: ಈಜಲು  ಬಂದ 5 ಮಂದಿಯಲ್ಲಿ ಇಬ್ಬರು ನೀರುಪಾಲು

25/11/2021, 09:05

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕುಟುಂಬದೊಂದಿಗೆ ಖಷಿಯಾಗಿ ಹರಿಯುವ ನೀರಿನಲ್ಲಿ ಇಳಿದ ಇಬ್ಬರು ನೀರಿನಲ್ಲಿ ಕಾಣೆಯಾದ ಘಟನೆ ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದ ಬುಧವಾರ 5 ಗಂಟೆ ಸುಮಾರಿನಲ್ಲಿ ಚಳ್ಳಕೆರೆ ನಗರದ  ಐದು ಜನ ಕುಟುಂಬ

ಸದಸ್ಯರೊಂದಿಗೆ ವೇದಾವತಿ ನದಿಯ ಚೆಕ್ ಡ್ಯಾಂ ನೀರಿನಲ್ಲಿ ಇಳಿದು ಖಷಿ ಪಡುತ್ತಿರುವ ಸಂದರ್ಭದಲ್ಲಿ  ಮೋನಿಷ ನೀರಿನಲ್ಲಿ ಮುಳುಗಿದಾಗ ರಕ್ಷಣೆ ಮಾಡಲು ಹೋಗಿ ಇಬ್ಬರು ಕುಟುಂದ ಸದಸ್ಯರ ಕಣ್ಣುಮುಂದೆಯೇ ಸೋಮಶೇಖರ್(37) ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೋನಿಷ(8) ಇಬ್ಬರು ನೀರಿನಲ್ಲಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಸುದ್ದಿ ಸ್ಥಳಕ್ಕೆ ಡಿವೈಎಸ್‍ಪಿ ಕೆ.ವಿ.ಶ್ರೀಧರ್, ತಹಶೀಲ್ದಾರ್ ಎನ್.ರಘುಮೂರ್ತಿ, ಸಿಪಿಐ ಜೆ.ಎಸ್.ತಿಪ್ಪೇಸ್ವಾಮಿ, ಎಎಸ್‍ಐ ರವೀಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಜಯಣ್ಣ ಹಾಗೂ ಸಿಬ್ಬಂದಿಗಳು ನೀರಿಗಿಳಿದು  ಕಾರ್ಯಾಚರಣೆ ನಡೆಸಿದರು ಪತ್ತೆಯಾಗದ ಕಾರಣ ಗುರುವಾರ ಬೆಳಗ್ಗೆ6 ಗಂಟೆಗೆ ಮತ್ತೆ ಶವಗಳ ಹುಡುಕಾಟ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿವೈಎಸ್ಪಿ ಕೆ.ವಿ.ಶ್ರೀಧರ್ ಮಾಹಿತಿ ತಿಳಿಸದ್ದಾರೆ.
ಚಳ್ಳಕೆರೆ ನಗರದ ಜತೆಯಲ್ಲಿದ್ದವರು ಕಾವ್ಯಪ್ರಕಾಶ್, ನೀರಿನಲ್ಲಿ ಕಾಣೆಯಾದ ಮೋನಿಷಳ ತಾಯಿ ಉಮಾದೇವಿ ಶಂಕಲಿಂಗಪ್ಪ, ನೀರಿನಲ್ಲಿ ಕಾಣೆಯಾದ ಸೋಮಶೇಖರ್ ಪತ್ನಿ ಸುಮಂಗಳ ಇದ್ದರು

ಇತ್ತೀಚಿನ ಸುದ್ದಿ

ಜಾಹೀರಾತು