12:04 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ವಾಮಂಜೂರ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆ: ಹಳೆ ವಿದ್ಯಾರ್ಥಿಗಳ ಹಾಗೂ ಅಂದಿನ ಶಿಕ್ಷಕರ ಸಮಾಗಮ

08/11/2021, 15:45

ಮಂಗಳೂರು(reporterkarnataka.com): ನಗರದ ಹೊರವಲಯದ ವಾಮಂಜೂರ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆಯ ಅಂದಿನ ಪ್ರಥಮ ವರ್ಷದ ಹಳೆ ವಿದ್ಯಾರ್ಥಿಗಳ  ಮತ್ತು ಅಂದಿನ ಪ್ರಾಧ್ಯಾಪಕರ ಸಮಾಗಮ ಕೂಟ ಸೈಂಟ್ ರೈಮಂಡ್ ಶಾಲಾ ಆವರಣದಲ್ಲಿ ಜರಗಿತು.

ಸುಮಾರು 36 ವರ್ಷಗಳ ಹಿಂದೆ ಆರಂಭವಾದ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆಯ ಅಂದಿನ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮಾರಿಬೆಲ್, ಸಿಸ್ಟರ್ ವಿನ್ ಜಾಯ್  ಹಾಗೂ ವಿಜಯಲಕ್ಷ್ಮಿ ಮತ್ತು ಇಂದಿನ ಪ್ರಾಂಶುಪಾಲರಾದ ಸಿಸ್ಟರ್ ವಿದ್ಯಾ,  ಸಂಚಾಲಕರಾದ ಸಿಸ್ಟರ್ ಲಿಲ್ಲಿ, ಸಿಸ್ಟರ್ ನವನೀತ, ಸಿಸ್ಟರ್ ಗ್ರೇಸಿ  ಅಧ್ಯಾಪಕರು ಗಳಾದ ರೊನಾಲ್ಡ್ ಲೋಬೊ ಹಾಗೂ ನಾಗರಾಜ್ ಮತ್ತು ಅಂದಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಸಿಸ್ಟರ್ ಮಾರಿಬೆಲ್, ಸಿಸ್ಟರ್ ವಿನ್ಜಾಯ್, ಮತ್ತು ವಿಜಯಲಕ್ಷ್ಮಿ ಟೀಚರ್ ಅವರನ್ನು ಹಳೆವಿದ್ಯಾರ್ಥಿಗಳ ವತಿಯಿಂದ  ಗೌರವಿಸಿ ಸನ್ಮಾನಿಸಲಾಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಸ್ಟರ್, ಇದು ನನ್ನ ಜೀವನದಲ್ಲಿ ಮರೆಯಲಾರದ ಸವಿನೆನಪು, ಅಂದು ತೀರಾ ಗ್ರಾಮೀಣ ಪ್ರದೇಶದ ಸೌಲಭ್ಯ ವಂಚಿತ ಮಕ್ಕಳು ನಮ್ಮ ಶಾಲೆಯಲ್ಲಿ ಪ್ರವೇಶಾತಿ ಪಡೆದು ಮೂಲಭೂತ ಸೌಲಭ್ಯಗಳ ಅಡೆತಡೆಗಳ ನಡುವೆಯೂ  ಅತ್ಯುತ್ತಮ ಶೇಕಡ 98 ಪರ್ಸೆಂಟ್ ಪಾಸ್ ಆಗಿದ್ದನ್ನ ಇಲ್ಲಿ ಸ್ಮರಿಸಿಕೊಂಡರು.

ಅಂದಿನ ಮಕ್ಕಳು ಇಂದು ನಮ್ಮ ಸತ್ಪ್ರಜೆಯಾಗಿ ಇರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ಮತ್ತೋರ್ವ ಸಿಸ್ಟರ್ ವಿನ್ಜಾಯ್  ಅವರು ಇದು ಸಹ ಹಳೆ ವಿದ್ಯಾರ್ಥಿಗಳನ್ನು ಮಕ್ಕಳೆಂದೇ ಕರೆದರು. ತನ್ನ ಪ್ರೀತಿಪೂರ್ವಕ ಹಳೆ ನೆನಪುಗಳನ್ನು ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ತಿಳಿಸಿದರು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಲಕ್ಷ್ಮಿ ಟೀಚರ್ ಅವರು ಸೈಂಟ್ ರೈಮಂಡ್ ಶಾಲೆಯಲ್ಲಿ ನಾನು ಅಧ್ಯಾಪಕಿಯಾಗಿ ಕೆಲಸ ಮಾಡಿದ ಕ್ಷಣಗಳು ತನ್ನ ಜೀವನದಲ್ಲಿ ಮರೆಯುವಂತಿಲ್ಲ. ಅಂದಿನ ಮಕ್ಕಳು ಇಂದಿನ ಹಳೆ ವಿದ್ಯಾರ್ಥಿಗಳು  ಸಹ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ಮಾತಿನ ಮಧ್ಯೆ  ಗದ್ಗದಿತರಾದ  ಅವರು ಹಳೆ ವಿದ್ಯಾರ್ಥಿಗಳನ್ನು ಕಂಡು ತನ್ನ ಮಾತಿನ ಮಧ್ಯೆ ಆನಂದಭಾಷ್ಪಗಳನ್ನು ಸುರಿಸಿದರು.

ಸನ್ಮಾನ ಕಾರ್ಯಕ್ರಮದ ಬಳಿಕ ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಹ ಬೋಜನವನ್ನು ಸ್ವೀಕರಿಸಿದರು.

ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಂದಾರ ರಾಜೇಶ್ ಭಟ್ ನೆರವೇರಿಸಿದರು. ರಾಜೇಶ್. ಬಿ ಯು. ವಂಧಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು