ಇತ್ತೀಚಿನ ಸುದ್ದಿ
ಎನ್.ಆರ್. ಪುರ: ಅಪ್ಪನ ಸಾವಿನಿಂದ ಮನನೊಂದ ಟೀನೇಜ್ ಪುತ್ರಿ; ಭದ್ರಾ ಡ್ಯಾಂ ಹಿನ್ನೀರಿಗೆ ಹಾರಿ ಆತ್ಮಹತ್ಯೆ
15/12/2021, 22:16
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅಪ್ಪ ಸಾವನ್ನಪ್ಪಿದ ನೋವು ತಾಳಲಾಗದೆ ಪುತ್ರಿ
ಭದ್ರಾ ಡ್ಯಾಂ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಎನ್.ಆರ್. ಪುರ ತಾಲೂಕಿನ ಮೆಣಸೂರಿನ ಭದ್ರಾ ಹಿನ್ನೀರಿನಲ್ಲಿ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ತರುಣಿಯನ್ನು
ಸ್ಪಂದನ (18) ಎಂದು ಗುರುತಿಸಲಾಗಿದೆ.ತಂದೆ ಸಾವಿನ ನೋವಿನಿಂದ ಮನನೊಂದು ಈಕೆ
ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ಸ್ಪಂದನ ತಂದೆ ಮೃತಪಟ್ಟಿದ್ದರು.ಎನ್.ಆರ್.ಪುರದಲ್ಲಿ ಪದವಿ ಓದುತ್ತಿದ್ದ ಸ್ಪಂದನ ಸಾವಿಗೆ ಶರಣಾಗಿದ್ದಾಳೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














