8:00 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅಮೆರಿಕದ ನೆಲದಿಂದ ‘ಶಕುಂತಲಾ’ ಯಶಸ್ವಿ ಉಡಾವಣೆ: ಕಾಫಿನಾಡಿನ ಯುವ ವಿಜ್ಞಾನಿಯ ಅದ್ಬುತ ಸಾಧನೆ

06/04/2022, 12:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ತನ್ನದೇ ಸ್ವಂತ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿ ಉಪಗ್ರಹವನ್ನು ತಯಾರಿಸಿ ಅಮೆರಿಕದ ಸ್ಪೆಸೆಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶವೇ ಹೆಮ್ಮೆಪಡುವಂತ ಸಾಧನೆಯನ್ನು ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಯುವಕ ಅವೇಜ್‌ ಅಹಮದ್‌ ಮಾಡಿದ್ದಾರೆ. 

ಆಲ್ದೂರು ಜನತೆ ತಮ್ಮ ಊರಿನ ಯುವಕನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ

ಅವೇಜ್‌ ಅಹಮದ್‌ ಅವರ ಸಂಶೋಧನೆಯ ಉಪಗ್ರಹ ಬೇರೆ ಎಲ್ಲಾ ಉಪಗ್ರಹಗಳಿಗಿಂತ ಶೇ.50 ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.

ಇಸ್ರೋದಿಂದಲೇ ತಮ್ಮ ಪ್ರಥಮ ಉಪಗ್ರಹ ಆನಂದ್‌ ಅನ್ನು ಉಡಾವಣೆ ಮಾಡುವ ಮಹತ್ವಕಾಂಕ್ಷೆ ಅವೇಜ್‌ ಅವರದಾಗಿತ್ತು. ಆದರೆ ಇಸ್ರೋದಲ್ಲಿ ಉಡಾವಣೆಗೆ ಡೇಟ್‌ ಸಿಗದ ಕಾರಣ ತಮ್ಮದೇ ನಿರ್ಮಾಣದ ಮತ್ತೂಂದು ಉಪಗ್ರಹ ಶಕುಂತಲಾವನ್ನು ಅಮೆರಿಕಾದ ಸ್ಪೇಸೆಕ್ಸ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ಶೀಘ್ರದಲ್ಲೇ ಇಸ್ರೋದಿಂದ ತಮ್ಮ ಮೊದಲ ನಿರ್ಮಾಣದ ಉಪಗ್ರಹವನ್ನು ಉಡಾವಣೆ ಮಾಡುವ ಕನಸು ಶೀಘ್ರದಲ್ಲೇ ನನಸಾಗಲಿದೆ.

ಅವೇಜ್‌ ಅಹಮದ್‌ ಆಲ್ದೂರಿನ ರಾಯಲ್‌ ಮೆಡಿಕಲ್ಸ್‌ ಮಾಲೀಕ ನದೀಮ್‌ ಅಹಮದ್‌ ಅವರ ಪುತ್ರ. ಆಲ್ದೂರಿನ ರೋಸ್‌ ಬಡ್‌, ಅಕ್ಷರ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಪಡೆದು ಪ್ರೌಡಶಿಕ್ಷಣವನ್ನು ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಮುಗಿಸಿದರು. ಸಿಇಟಿಯಲ್ಲಿ 477ನೇ ರ್‍ಯಾಂಕ್‌ ಪಡೆದು ಆರ್‌.ವಿ. ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಜೆಇಇ ಪರೀಕ್ಷೆಯಲ್ಲಿ 2000 ರ್‍ಯಾಂಕ್‌ ಪಡೆದು ಭಾರತದ ನಂ.1 ನಿಟ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಭಾರತದ ನಂ.1 ಖಾಸಗಿ ಕಾಲೇಜು ಬಿಟ್ಸ್‌-ಪಿಲಾನಿ(ಬಿರ್ಲಾ ಇನ್ಸ್‌ಟಿಟ್ಯೂಟ್‌

ಆಫ್‌ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು.

ಎಂಎಸ್ಸಿ ಮ್ಯಾಥಮೆಟಿಕ್ಸ್‌ ಡಿಗ್ರಿ ಪಡೆದು ಹೊರಬಂದ ಪಿಕ್ಸೆಲ್‌ ಎಂಬ ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ.

ಬಾಲ್ಯದಿಂದಲೂ ಬ್ಯಾಹ್ಯಾಕಾಶದ ಬಗ್ಗೆ ಕುತೂಹಲ, ಆಸಕ್ತಿ ಬೆಳೆಸಿಕೊಂಡಿದ್ದು ಎಲನ್‌ ಮಾಸ್ಕ್ನ ಎರೋಸ್ಪೇಸ್‌ ಕಂಪೆನಿ “ಸ್ಪೆಸೆಕ್ಸ್‌’ ನಿಂದ ಪ್ರಭಾವಿತರಾದ ಅವೇಜ್‌ ಭಾರತದಲ್ಲಿಯೂ ಇದೇ ರೀತಿಯ ಕಂಪೆನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಇಟ್ಟಿಕೊಂಡು ಇಂದು ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾಂರಭಿಸುವ ಮೂಲಕ ತಮ್ಮ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ತಾವು ನಿರ್ಮಿಸಿದ ಖಾಸಗಿ ಉಪಗ್ರಹವನ್ನು ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು