ಇತ್ತೀಚಿನ ಸುದ್ದಿ
ಅಳಪೆಪಡ್ಪು: ಕೆರೆಯಲ್ಲಿ ನೀರಾಟಕ್ಕೆ ತೆರಳಿದ್ದ ಇಬ್ಬರು ಯುವಕರು ದಾರುಣ ಸಾವು
30/07/2023, 22:47

ಮಂಗಳೂರು(reporterkarnataka.com): ನಗರದ ಹೊರವಲಯದ ಅಳಪೆ ಪಡ್ಪು ರೈಲ್ವೆ ನಿಲ್ದಾಣ ಸಮೀಪವಿರುವ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ಕೃತಕ ಕೆರೆಯಲ್ಲಿ ಆಟವಾಡಲು ಸ್ನೇಹಿತರೊಂದಿಗೆ ಹೋದ ವೀಕ್ಷಿತ್ (28) ಹಾಗೂ ವರುಣ್(26) ಎಂಬವರು ಸಾವನ್ನಪ್ಪಿದ ಯುವಕರು ಎಂದು ಗುರುತಿಸಲಾಗಿದೆ.
ಎಂದಿನಂತೆ ರಜಾದಿನವಾದ ಭಾನುವಾರ ಆಟವಾಡಲು ಯುವಕರು ಹೋಗಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
ಕಂಕನಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .