ಇತ್ತೀಚಿನ ಸುದ್ದಿ
ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್: ಮಸ್ಕಿ ಮಹಿಳಾ ತಹಶೀಲ್ದಾರ್‌ರಿಂದ ರಾತ್ರಿ ಕಾರ್ಯಾಚರಣೆ
25/09/2021, 09:24

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಹಂಪನಾಳ ಗ್ರಾಮದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ತಹಶೀಲ್ದಾರ್ ಬ್ರೇಕ್ ಹಾಕಿದ್ದಾರೆ.
ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗಳ ಮೇಲೆ ತಹಶೀಲ್ದಾರ್ ಆರ್. ಕವಿತಾ ಅವರು ದಿಢೀರ್ ದಾಳಿ ನಡೆಸಿದ್ದಾರೆ.
ತಹಶೀಲ್ದಾರ್ ಅವರನ್ನೊಳಗೊಂಡ ಕಂದಾಯ ಅಧಿಕಾರಿಗಳ ತಂಡ ಪೊಲೀಸ್ ಇಲಾಖೆಯ ಜತೆ ಸೇರಿ ಕಾರ್ಯಾಚರಣೆ ನಡೆಸಿದ್ದಾರೆ. ತುರುವಿಹಾಳ ಪೊಲೀಸ್ ಅಧಿಕಾರಿಗಳು ವಾಹನ ಸಹಿತ ಮರಳು ಜಪ್ತಿ ಮಾಡಿದ್ದಾರೆ.