ಇತ್ತೀಚಿನ ಸುದ್ದಿ
ಏರ್ಪೋರ್ಟ್‌ನಲ್ಲಿ ಸಿಕ್ಕಿದ ಬಳೆಯನ್ನು ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದ ಡೊಂಬಯ್ಯ ಪೂಜಾರಿ
27/08/2021, 17:23
ಮಂಗಳೂರು(reporterkarnataka.com)
ವಿದೇಶದಿಂದ ಬರುವಾಗ ವಿಧವಿಧವಾಗಿ ಬಂಗಾರವನ್ನು ಅಧಿಕಾರಿಗಳ ಕಣ್ಣು ತಪ್ಪಿಸಿ ತರುವ ಘಟನೆಗಳು ಸುದ್ದಿಯಾಗುತ್ತಿರುವ ನಡುವೆ ವಿಮಾನ ನಿಲ್ದಾಣ ಆವರಣದಲ್ಲಿ ದೊರೆತ ಬಳೆಯೊಂದನ್ನು ವಾಪಾಸ್ ನೀಡಿದ ಇಲ್ಲಿಯ ಸಿಬ್ಬಂದಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಲಿ ರಿಟ್ರಿವರ್ ಆಗಿರುವ ಡೊಂಬಯ್ಯ ಪೂಜಾರಿ ಅವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಹಳದಿ ಲೋಹದ ಬಳೆಯನ್ನು ಕಂಡಿತು. ಪ್ರಾಮಾಣಿಕತೆಯೆನ್ನು ಮೆರೆದ ಅವರು ಚಿನ್ನದ ಬಳೆಯನ್ನು ಲಾಸ್ಟ್ & ಫೌಂಡ್ ಚೇಂಬರ್‌ಗೆ ನೀಡಿದ್ದಾರೆ.
Dombay Poojari, a trolly retriever at the airport found a yellow metal bangle at the parking lot. In an immense gesture of honesty and integrity, Mr. Poojari deposited the gold bangle in the Lost & Found. We salute the honesty and integrity of Mr. Poojari. #GatewayToGoodness pic.twitter.com/YAN1IsSQXe
— Mangaluru Airport (@mlrairport) August 27, 2021
ಶ್ರೀ ಪೂಜಾರಿ ಅವರ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ನಾವು ಅಭಿನಂದಿಸುತ್ತೇವೆ ಎಂದು ಮಂಗಳೂರು ಏರ್ಪೋರ್ಟ್ ಟ್ವಿಟರ್ ಖಾತೆಯಲ್ಲಿ #gatewaystogoodness ಎನ್ನುವ ಟ್ಯಾಗ್ ಲೈನ್ ಜತೆ ಹಂಚಿಕೊಂಡಿದೆ.
ಡೊಂಬಯ್ಯ ಪೂಜಾರಿಯವರು ಮಂಗಳೂರು ತಾಲೂಕಿನ ಅದ್ಯಪಾಡಿ ಪದವಿನ ನಿವಾಯಿಸಿಯಾಗಿದ್ದು, ಹಲವು ವರ್ಷಗಳಿಂದ ಏರ್ಪೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.