ಇತ್ತೀಚಿನ ಸುದ್ದಿ
Accident | ಪಾದಚಾರಿ ಯುವಕನಿಗೆ ಕಾರು ಡಿಕ್ಕಿ: ಗಂಭೀರ ಗಾಯ; ಆಸ್ಪತ್ರೆಗೆ ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ಉಸ್ಮಾನ್ ಕಲ್ಲಾಪು
13/04/2025, 14:52

ಮಂಗಳೂರು(reporterkarnataka.com): ಪಾದಚಾರಿ ಯುವಕನೊಬ್ಬನಿಗೆ ಇಯೋನ್ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುನಲ್ಲಿ ನಡೆದಿದೆ.
ಅಪಘಾತದ ರಭಸಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಯುವಕನನ್ನು ಬಿಹಾರ ಮೂಲದ ಮೆಹಬೂಬ್ ಎಂದು ಗುರುತಿಸಲಾಗಿದೆ.
ತಲೆಗೆ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಯುವಕ
ಬಿದ್ದಿದ್ದ. ಯುವಕನಿಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿ ನಿಂತಿದ್ದ ಇನೋವಾ ಕಾರಿಗೂ ಇಯೋನ್ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಸಾಮಾಜಿಕ ಕಾರ್ಯಕರ್ತ ಉಸ್ಮಾನ್ ಕಲ್ಲಾಪು ಅವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನ ಅಂಗಿಯನ್ನೇ ಹರಿದು ಯುವಕನ ತಲೆಗೆ ಉಸ್ಮಾನ್ ಕಲ್ಲಾಪು ಕಟ್ಟಿದ್ದಾರೆ. ಗಾಯಗೊಂಡ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ.ಅಪಘಾತ ಭಯಾನಕ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.