ಇತ್ತೀಚಿನ ಸುದ್ದಿ
ಎಸಿಬಿ ದಾಳಿ: ಮನೆಯಲ್ಲಿದ್ದ ಕಾರು ತನ್ನದ್ದಲ್ಲ ಎಂದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಇಂಜಿನಿಯರ್!!
16/03/2022, 18:23
ಕೊಪ್ಪಳ:(reporterkarnataka.com):
ಕೊಪ್ಪಳದ ಎಂ.ವಿ. ಅಗಡಿ ಲೇಔಟ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಅಸಿಸ್ಟಂಟ್ ಇಂಜಿನೀಯರ್ ಗಿರೀಶ್ ಮನೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಾಳಿ ನಡೆಸಿದ್ದು, ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ತನ್ನದ್ದಲ್ಲ ಎಂದು ಎಂಜಿನಿಯರ್ ಎಸಿಬಿ ಅಧಿಕಾರಿಗಳನ್ನು ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಎಸಿಬಿ ಅಧಿಕಾರಿಗಳು ಕಾರು ತಪಾಸಣೆ ಮಾಡಿದಾಗ ಮನೆಗೆ ಸಂಭಂದಿಸಿದ ದಾಖಲಾತಿ ಪತ್ತೆಯಾಗಿದೆ. ಗಿರೀಶ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕೊಪ್ಪಳ ಹಾಗೂ ಯಲಬುರ್ಗಾ ಹಾಗೂ ಬಾಗಲಕೋಟೆಯಲ್ಲಿ ಐದು ಕಡೆ ದಾಳಿ ನಡೆದಿದೆ.