ಇತ್ತೀಚಿನ ಸುದ್ದಿ
ಕುಡಿತದ ಮತ್ತಿನಲ್ಲಿ ಹೆತ್ತಬ್ಬೆಯನ್ನೇ ಕೊಂದು ಸುಟ್ಟು ಹಾಕಿದ ಪಾಪಿ ಪುತ್ರ: ಅಪ್ಪನಿಗೂ ಚರ್ಮ ಸುಲಿಯುವ ತರಹ ಬಾರಿಸಿದ್ದ!
31/07/2025, 14:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುಡಿದ ಮತ್ತಿನಲ್ಲಿ ಪುತ್ರನೊಬ್ಬ ತಾಯಿಯನ್ನು ಕೊಂದು, ಆಕೆ ಮೃತದೇಹಕ್ಕೆ ಬೆಂಕಿ ಹಾಕಿ ಪಕ್ಕದಲ್ಲೇ ಮಲಗಿದ ಆಘಾತಕ್ಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 52 ವರ್ಷದ ಭವಾನಿ ಎಂದು ಗುರುತಿಸಲಾಗಿದೆ. ಅಮ್ಮನನ್ನೇ ಕೊಂದ ಪಾಪಿ ಪುತ್ರನನ್ನು 28ರ ಹರೆಯದ ಪವನ್ 28 ಎಂದು ಗುರುತಿಸಲಾಗಿದೆ. ಪವನ್ ಮದುವೆ ಕೂಡ ಆಗಿರಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ. ಕಳೆದ ರಾತ್ರಿ ತಾಯಿಯನ್ನ ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ತಾಯಿ ಮೃತದೇಹ ಬೆಂಕಿಯಲ್ಲಿ ಬೇಯುತ್ತಿದ್ದರೆ ಕೊಲೆಗಾರ ಮಗ ಪ್ರಜ್ಞೆ ಇಲ್ಲದವನಂತೆ ಅಲ್ಲೇ ಪಕ್ಕದಲ್ಲಿ ಮಲಗಿದ್ದಾನೆ. ತಾಯಿ ಭವಾನಿ ಮೃತದೇಹ ಬಹುತೇಕ ಸುಟ್ಟುಹೋಗಿದ್ದು ಕಾಲು ಹಾಗೂ ಕೈ ಮಾತ್ರ ಉಳಿದಿದೆ. ಅಕ್ಕಪಕ್ಕದವರಿಂದ ವಿಷಯ ತಿಳಿದು ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಯಿಯನ್ನೇ ಕೊಂದು ಸುಟ್ಟು ಹಾಕಿದ ಈ ಪುತ್ರ ತಿಂಗಳ ಹಿಂದೆ ಅಪ್ಪನ ಚರ್ಮ ಸುಲಿಯುವಂತೆ ಹೊಡೆದಿದ್ದ. ತಾಯಿಯನ್ನೇ ಕೊಂದವ ಅಪ್ಪನ ಮೇಲೂ ಮೃಗೀಯ ವರ್ತನೆ ತೋರಿದ್ದ.
ಲೆದರ್ ಬೆಲ್ಟ್ ನಲ್ಲಿ ಅಪ್ಪನ ಬೆನ್ನಿನ ಚರ್ಮ ಸುಲಿಯುವಂತೆ ಹೊಡೆದಿದ್ದ. ಸೋಮೇಗೌಡ ಮಗನಿಂದಲೇ ಬೆನ್ನಿನ ಚರ್ಮ ಸುಲಿಸಿಕೊಂಡ ನತದೃಷ್ಟ ಅಪ್ಪ.
ಸೋಮೇಗೌಡನ ಬೆನ್ನಿನ ಸ್ಥಿತಿ ನೋಡಿದ್ರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ. ನಿತ್ಯ ಕೂಲಿ ಮಾಡೋದು ಸಂಜೆ ಕುಡಿದು ಬಂದು ಅಪ್ಪ-ಅಮ್ಮನನ್ನ ಹೊಡೆಯೋದೇ ಇವನ ಕಾಯಕ. ಮಗನೆಂಬ ಮಮಕಾರದಿಂದ ಯಾರಿಗೂ ಹೇಳದೆ ನೋವು ಅನುಭವಿಸುತ್ತಿದ್ದ ಹೆತ್ತವರು.
ವಿಷಯ ತಿಳಿದು ಅಕ್ಕಪಕ್ಕದವರು ಹಲವು ಬಾರಿ ಪಾಪಿ ಪುತ್ರ ಪವನ್ ಗೆ ಬುದ್ಧಿ ಹೇಳಿದ್ದರು.
ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಿಯನ್ನ ಕೊಂದ ಮಗ ಪವನ್ ನನ್ನ ಆಲ್ದೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.