10:39 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

Mangaluru | ಜೆಪ್ಪು ಸೆಮಿನರಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

15/12/2025, 22:01

ಮಂಗಳೂರು(reporterkarnataka.com): ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (FOCUS), ಮಂಗಳೂರು, 2025ರ ಕ್ರಿಸ್ಮಸ್ ಆಚರಣೆಯನ್ನು ನಗರದ ಜೆಪ್ಪು ಸೆಮಿನರಿಯ ಮರಿಯಾ ಜಯಂತಿ ಹಾಲ್‌ನಲ್ಲಿ ಆಚರಿಸಿತು.
ಕಾರ್ಯಕ್ರಮವನ್ನು ಮಂಗಳೂರು ಧರ್ಮಕ್ಷೇತ್ರದ YCS YSM ನಿರ್ದೇಶಕರಾದ ರೆ. ಫಾ. ರೋಶನ್ ಡಿಕುನ್ಹ ಅವರು ಆಶೀರ್ವದಿಸಿದರು ಮತ್ತು ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜಾನ್ ಬಿ. ಮೊಂತೇರೊ ಅವರು ಅಧ್ಯಕ್ಷತೆ ವಹಿಸಿದರು. ಈ ದಿನದ ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕ (ತೋಟಗಾರಿಕೆ) ಜೋ ಪ್ರದೀಪ್ ಡಿಸೋಜ ಅವರು ಉಪಸ್ಥಿತರಿದ್ದರು
ಅದೇ ದಿನ ಸಂಸ್ಥೆಯ ವಾರ್ಷಿಕ  ಸಭೆ ನಡೆಯಿತು ಮತ್ತು 2026-27ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆ ನಡೆಯಿತು.

*ಚುನಾಯಿತರಾದ ಹೊಸ ಪದಾಧಿಕಾರಿಗಳು:*
ಅಧ್ಯಕ್ಷ: ಮೆಲ್ವಿನ್ ಪ್ರಕಾಶ್ ಪಿರೇರಾ, ಮೆಸ್ಕಾಂ, ಬಂಟ್ವಾಳ
ಉಪಾಧ್ಯಕ್ಷ: ಕೆವಿನ್ ಲೋಬೊ, ಸಿದ್ದಕಟ್ಟೆ, ಬಂಟ್ವಾಳ
ಕಾರ್ಯದರ್ಶಿ: ಪಿಯುಸ್ ಡಿಸೋಜ, ಮೆಸ್ಕಾಂ, ಮಂಗಳೂರು
ಕೋಶಾಧಿಕಾರಿ: ಮೆಲ್ವಿನ್ ಡಿಸೋಜ, ಮೆಸ್ಕಾಂ, ಉಳ್ಳಾಲ
ಸಂಯೋಜಕ: ಸುನಿಲ್ ಮೊಂತೇರೊ, ಮೆಸ್ಕಾಂ, ಗುರುಪುರ ಕೈಕಂಬ
ಸಂಘಟನಾ ಕಾರ್ಯದರ್ಶಿ: ಸಿರಿಲ್ ರಾಬರ್ಟ್ ಡಿಸೋಜ, ಪೆರ್ಮನ್ನೂರು, ಉಳ್ಳಾಲ ಇವರು ಆಯ್ಕೆಯಾದರು
ಸಂಸ್ಥೆಯು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸಿತು. ಹಾಗೆಯೇ ದಾನಧರ್ಮದ ಭಾಗವಾಗಿ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಸಹಾಯವನ್ನು ಒದಗಿಸಿತು.
ಗಣ್ಯರನ್ನು ಜಾನ್ ಡಿಸೋಜ ಫೋಕಸ್ ಸಂಘಟನೆ ಅಧ್ಯಕ್ಷರು ಸ್ವಾಗತಿಸಿದರು, ಸಂಘಟನೆಯ ಕಾರ್ಯದರ್ಶಿಗಳಾದ ಬೀನಾ ಡಿಸೋಜರವರು ಧನ್ಯವಾದ ಅರ್ಪಿಸಿದರು, ಕಾರ್ಯ ನಿರ್ವಹಣೆಯನ್ನು ಸಂಘಟನೆಯ ಕನ್ವೇನರ್ ಮೌರಿಸ್ ಡಿಸೋಜಾ ಅವರು ನೆರವೇರಿಸಿದರು.
ಮನೋರಂಜನೆ ಆಟ ಇತ್ಯಾದಿಗಳನ್ನು ವಿಲ್ಫ್ರೆಡ್ ಮತಾಯಸ್ ಅವರು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಸುಮಾರು 92 ಜನ ವಿವಿಧ ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಹಾಗೂ ನಿವೃತ್ತ ಅಧಿಕಾರಿ ಹಾಗೂ ನೌಕರರು, ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು