ಇತ್ತೀಚಿನ ಸುದ್ದಿ
ಟೀಮ್ ಪ್ಯಾರಡೈಸ್ ಕ್ರಿಕೆಟ್ ಕ್ಲಬ್ ಕುವೈಟ್ ತಂಡದ ಮುಖ್ಯಸ್ಥರಿಗೆ ಸುದೇಶ್ ಪೂಜಾರಿ ಗರೋಡಿ ಜರ್ಸಿ ಕೊಡುಗೆ
05/12/2025, 22:05
ಮಂಗಳೂರು(reporterkarnataka.com): ಟೀಮ್ ಗರೋಡಿ ಗಲ್ಫ್ ತುಳುವ ತಂಡದ ಸ್ಥಾಪಕರಾದ ಸುದೇಶ್ ಪೂಜಾರಿ ಗರೋಡಿ ಅವರು ಜರ್ಸಿ (Jersey) ಯನ್ನು ಟೀಮ್ ಪ್ಯಾರಡೈಸ್ ಕ್ರಿಕೆಟ್ ಕ್ಲಬ್ ಕುವೈಟ್ ನ ತಂಡದ ಮುಖ್ಯಸ್ಥರಾದoತಹ ಸುಜಯ್ ಅವರಿಗೆ ಕೊಡುಗೆಯಾಗಿ ನೀಡಿದರು.
ಕುವೈಟ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುವೈಟ್ ದೇಶದ ಉದ್ಯಮಿ ಮೋಹನ್ ದಾಸ್ ಕಾಮತ್ ಮಂಜೇಶ್ವರ, ರಘು ಸಿ ಸುವರ್ಣ ಮರ್ನಾಡ್, ಗನ್ ಶಮ್ ಅತ್ತಾವರ, ಸುಕುಮಾರ್ ಕರ್ಕೇರ ಬಂಟ್ವಾಳ, ಸುಕೇಶ್ ಪೂಜಾರ, ಆನಂದ್ ಬೋಳಾರ್, ಸುಕೇಶ್ ಮಡಿವಾಳ ಉಡುಪಿ ಅವರು ಉಪಸ್ಥಿತರಿದ್ದರು. ಟೀಮ್ ಗರೋಡಿ ಹಾಗೂ ಟೀಮ್ ಗರೋಡಿ ಗಲ್ಫ್ ತುಳುವೆರ್ ಇವರು ಅನೇಕ ಸಾಮಾಜಿಕ ಹಾಗೂ ಆರ್ಥಿಕ ಚಟುವಿಕೆಗಳಲ್ಲಿ ಭಾಗಿಯಾಗಿದ್ದು ಇವರು ಹೀಗೆ ಇನ್ನಷ್ಟು ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳಲ್ಲಿ ಎಂದು ಆಶಿಸುತ್ತೇವೆ.











