ಇತ್ತೀಚಿನ ಸುದ್ದಿ
Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಸಂಪೂರ್ಣ ಭಸ್ಮ
17/11/2025, 18:38
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka.com
ಮಡಿಕೇರಿ ತಾಲ್ಲೂಕಿನ ನೆಲ್ಯ ಹುದಿಕೇರಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ಹೊಟ್ಟೆ ಪಾಡಿಗೆ ಇಟ್ಟುಕೊಂಡಿದ್ದ ಟೀ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲು ಆದ ಘಟನೆ ತಡರಾತ್ರಿ ಸಂಭವಿಸಿದೆ.
ಸ್ಥಳೀಯ ವಾಹನ ಸವಾರರು ಗಮನಿಸಿ ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಲಾಯಿತಾದರು ತಲುಪುವಷ್ಟರಲ್ಲಿ ಅಂಗಡಿ ಬೆಂಕಿಗೆ ಆಹುತಿ ಆಗಿದೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಇದೇ ಅಂಗಡಿ ಕೆಲವು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಸಂಪೂರ್ಣ ಹಾನಿ ಉಂಟಾಗಿತ್ತು.













