ಇತ್ತೀಚಿನ ಸುದ್ದಿ
ಮಂಗಳೂರು ಶೀಘ್ರದಲ್ಲೇ ಗೇಮಿಂಗ್ ಮತ್ತು ಎಐಗೆ ಹಬ್ ಆಗಲಿದೆ: ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ
13/11/2025, 12:08
ಮಂಗಳೂರು(reporterkarnataka.com): ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಿದ್ದು, ಗೇಮಿಂಗ್ ಮತ್ತು ಎಐಗೆ ಹಬ್ ಆಗಿ ತ್ವರಿತವಾಗಿ ಉದಯಿಸುತ್ತಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಜಿಸಿಸಿ ಹೂಡಿಕೆಗಳು ಹರಿದು ಬಂದಿದೆ ಎಂದು ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2025–2030 ರಾಜ್ಯದಾದ್ಯಂತ ಉದ್ಯಮಶೀಲ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಡಿಇಎಂನ ಮ್ಯಾಂಡೇಟ್ ಅನ್ನು ಬಲಪಡಿಸುತ್ತದೆ. ಈ ಪಾಲಿಸಿಯು ಶೀಘ್ರವೇ ಜಾರಿಗೆ ಬಂದರೆ ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ನಾಯಕತ್ವ ವಹಿಸಿರುವುದು ತಿಳಿಯುತ್ತದೆ ಹಾಗೂ ಕರ್ನಾಟಕದ ಹೊಸ ಆವಿಷ್ಕಾರ ಉದ್ದೇಶಕ್ಕೆ ಪೂರಕವಾಗಿ ಉದ್ಯಮದ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಿದ್ದು, ಗೇಮಿಂಗ್ ಮತ್ತು ಎಐಗೆ ಹಬ್ ಆಗಿ ತ್ವರಿತವಾಗಿ ಉದಯಿಸುತ್ತಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಜಿಸಿಸಿ ಹೂಡಿಕೆಗಳು ಹರಿದು ಬಂದಿದೆ. ಚಾಮರಾಜನಗರದಲ್ಲಿ ಉದ್ಯಮಗಳು 450ಕ್ಕೂ ಹೆಚ್ಚು ಐಟಿ/ ಐಟಿಇಎಸ್ ಉದ್ಯೋಗಗಳನ್ನು ಸೃಷ್ಟಿಸಿವೆ. ಶೇ.70 ಮಹಿಳಾ ಪ್ರಾತಿನಿಧ್ಯ ವಿಶೇಷವಾಗಿದೆ. ಕೆಎಎನ್ ಮತ್ತು ಎಲಿವೇಟ್ ನಂತಹ ಯೋಜನೆಗಳು ರಾಜ್ಯದ ₹600 ಕೋಟಿ ಡೀಪ್ ಟೆಕ್ ಫಂಡ್ ಒದಗಿಸಿದ್ದು, 30 ದೇಶಗಳಾದ್ಯಂತ ಜಾಗತಿಕ ಪಾಲುದಾರಿಕೆಗಳು ಸಾಧ್ಯವಾಗಿದೆ. ಈ ಪಾಲಿಸಿ ಕರ್ನಾಟಕವನ್ನು ಜಾಗತಿಕವಾಗಿ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಲಿದೆ ಎಂದು ಗುಪ್ತಾ ಹೇಳಿದ್ದಾರೆ.












