ಇತ್ತೀಚಿನ ಸುದ್ದಿ
Sports | ಪೊಲೀಸ್ ಉಪ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಆಗುಂಬೆ ಪೊಲೀಸರು ಚಾಂಪಿಯನ್
30/10/2025, 16:14
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಡಿವೈಎಸ್ಪಿ ಅರವಿಂದ ಕಲಗುಜ್ಜಿರವರ ನೇತೃತ್ವದಲ್ಲಿ ಅಗಳಬಾಗಿಲು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಉಪವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪೊಲೀಸ್ ಠಾಣೆಗಳ ತಂಡ ಭಾಗಿಯಾಗಿ ಆಗುಂಬೆ ಪೊಲೀಸರು ಚಾಂಪಿಯನ್ ಪಟ್ಟವನ್ನು ಪಡೆದರು.
ಆರು ಪೊಲೀಸ್ ಠಾಣೆಗಳಾದ ತೀರ್ಥಹಳ್ಳಿ, ಆಗುಂಬೆ, ಮಾಳೂರು, ರಿಪ್ಪನಪೇಟೆ, ನಗರ, ಹೊಸನಗರ ತಂಡಗಳು ಭಾಗವಹಿಸಿದ್ದವು. ಐದು ಓವರ್ ಗಳ ಕ್ರಿಕೆಟ್ ಮ್ಯಾಚ್ ಆಡಿದ ಪೊಲೀಸ್ ತಂಡಗಳ ಪೈಕಿ ಪೈನಲ್ಸ್ ನಲ್ಲಿ ಆಗುಂಬೆ ಪೊಲೀಸ್ ಠಾಣೆಯ ತಂಡ ಗೆಲುವನ್ನು ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮಾಳೂರು ಪೊಲೀಸ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.
ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ಪಡೆದ ತಂಡಗಳಿಗೆ ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಅಭಿನಂದನೆ ತಿಳಿಸಿದ್ದಾರೆ.












