4:29 AM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

Mangaluru | ಕುಲಶೇಖರ ಪರಿಸರದಲ್ಲಿ ಸಿಡಿಲಿಗೆ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ: 10 ಲಕ್ಷಕ್ಕೂ ಹೆಚ್ಚು ನಷ್ಟ; ಐವನ್ ಭೇಟಿ

20/10/2025, 15:50

ಮಂಗಳೂರು(reporterkarnataka.com): ನಗರದ ಕುಲಶೇಖರ ಪರಿಸರದಲ್ಲಿ ಶನಿವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು, ಸುಮಾರು 10 ಮನೆಗಳಿಗೆ ಹಾನಿಯಾಗಿವೆ. ವಿದ್ಯುತ್ ಸಂಪರ್ಕ ಕಳೆದುಕೊಂಡು ವಿದ್ಯುತ್ ಮೀಟರ್ ಎಲ್ಲ ಸುಟ್ಟು ಹೋಗಿ 10 ಲಕ್ಷಕ್ಕೂ ನಷ್ಟ ಉಂಟಾಗಿದ್ದು ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಭೇಟಿ ಮತ್ತು ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ವಾರ್ಡ್ ನಂಬರ್ 51 ಸಿರ್ಲಾಪಡ್ಪು ನಲ್ಲಿ ನಿನ್ನೆ ಸಂಜೆ ಬಿದ್ದ ಅತಿಯಾದ ಮಳೆ, ಹುಡುಗು ಮತ್ತು ಸಿಡಿಲಿನಿಂದ ಸಿರ್ಲಾಪಡ್ಪು ನಲ್ಲಿ ಹೈಟೆನ್ಷನ್ ಲೈನ್ ಪ್ರಭಾವದಿಂದ ಸಿಡಿಲು ಬಡಿದು ಒಂದು ತೆಂಗಿನ ಮರ ಮತ್ತು ಮನೆಗಳಿಗೆ ಹಾನಿಯಾಗಿದ್ದು ಅನೇಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡು ಎಲ್ಲಾ ಮನೆಯ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿ ಮನೆ ಒಳಗೆ ಹಾನಿಯಾಗಿ ತುಂಬಲಾರದ ನಷ್ಟವಾಗಿದೆ, ಈ ಬಗ್ಗೆ ಈಗಾಗಲೇ ಸ್ಥಳಯ ಗ್ರಾಮ ಲೆಕ್ಕಾಧಿಕಾರಿಗಳಿಗೆ, ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ನಗರ ಪಾಲಿಕೆಯ ಇಂಜಿನಿಯರ್ಗಳೊಂದಿಗೆ ಚರ್ಚಿಸಿ ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ರವರು ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ವರ್ಷಂಪ್ರತಿ ಇದೇ ರೀತಿ ತೊಂದರೆ ಉಂಟಾಗುತ್ತಿದ್ದು ಹೈ ಟೆನ್ಶನ್ ವಯರ್ ನ ಪರಿಣಾಮ ಈ ರೀತಿ ತೊಂದರೆ ಉಂಟಾಗುತ್ತಿದ್ದು ಹೈ ಟೆನ್ಶನ್ ವಯರ್ ಮನುಷ್ಯನಿಗೆ ಕೈಗೆಟಕುವ ಎತ್ತರದಲ್ಲಿ ಇರುವುದರಿಂದ ಮತ್ತು ಎಲೆಕ್ಟ್ರಿಕ್ ವೈರ್ ಗಳು ತಾಗಿ ಅದಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿರುವುದು ದಿನನಿತ್ಯದ ಸಮಸ್ಯೆಯಾಗಿದೆ. ಈ ಬಗ್ಗೆ ಮೆಸ್ಕಾಂ ಎಂಡಿ ಜಯಕುಮಾರ್ ಅವರ ಜೊತೆ ಮಾತನಾಡಿ ಕೂಡಲೇ ಈ ಪ್ರದೇಶಕ್ಕೆ ಭೇಟಿ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳದೆ ಇದ್ದಲ್ಲಿ ಇದೊಂದು ಗಂಭೀರ ಶಾಶ್ವತ ಸಮಸ್ಯೆಯಾಗುವುದು ಎಲ್ಲರಿಗೆ ಭಯಭೀತಿ ಉಂಟಾಗುತ್ತಿದೆ ಮುಂದಕ್ಕೆ ಆಗುವ ತೊಂದರೆಯನ್ನು ಆಗದ ಹಾಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಹೆನ್ರಿ, ಬಾಸಿಲ್ ರೋಡ್ರಿಗೆಸ್, ಯುವ ಕಾಂಗ್ರೆಸ್ ನಾಯಕರಾದ ಬ್ರಿಸ್ಟನ್ ರೋಡ್ರಿಗೆಸ್, ಸ್ಥಳೀಯರಾದ ಶಾಂತಿ, ಸಾಂಡ್ರಾ, ಇಗ್ನೇಶಿಯಸ್, ಬಬಿತಾ ಸಿಕ್ವೇರಾ, ಸ್ಟ್ಯಾನಿ ಫರ್ನಾಂಡೆಸ್, ವಲೇರಿಯನ್, ಲಾರೆನ್ಸ್ ಉಪಸ್ಥಿತಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು