ಇತ್ತೀಚಿನ ಸುದ್ದಿ
Chikkamagaluru | ಸಂಸಾರ ಕಲಹ: ಮಡದಿಯ ಭೀಕರವಾಗಿ ಕೊಚ್ಚಿ ಕೊಂದ ಪತಿ; 6 ವರ್ಷದ ಪುತ್ರ ಅನಾಥ
16/10/2025, 14:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಂಸಾರದಲ್ಲಿ ಕಲಹದಿಂದ ಪತಿಯೊಬ್ಬ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಂದ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದಿದೆ.
ತನು (25) ಗಂಡನಿಂದ ಭೀಕರವಾಗಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಮನೆಯ ರೂಮಿನಲ್ಕಿ ರಕ್ತದ ಮಡುವಿನಲ್ಲಿ ಮಡದಿಯ ಶವ ಪತ್ತೆಯಾಗಿದೆ.
ರಮೇಶ್ ಎಂಬಾತ ತನ್ನ ಪತ್ನಿಯನ್ನು ಕ್ರೂರವಾಗಿ ಕೊಚ್ಚಿ ಕೊಂದಿರುವುದಾಗಿ ತಿಳಿದು ಬಂದಿದೆ. ಗಂಡನ ಜೊತೆ ಜಗಳವಾಗಿ 2 ವರ್ಷದಿಂದ ಪ್ರತ್ಯೇಕವಾಗಿ ತನು ವಾಸವಿದ್ದಳು. 7 ವರ್ಷದ ಹಿಂದೆ ಮದುವೆಯಾಗಿದ್ದು, 6 ವರ್ಷದ ಮಗನಿದ್ದಾನೆ. ರಮೇಶ್ ನಿನ್ನೆ ರಾತ್ರಿ ಕುಡಿದು ಬಂದು ಪತ್ನಿಯನ್ನ ಕ್ರೂರವಾಗಿ ಕೊಚ್ಚಿ ಕೊಂದಿದ್ದಾನೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.