ಇತ್ತೀಚಿನ ಸುದ್ದಿ
ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ
15/10/2025, 19:01

*ಕಾರು, ಜೀಪು, ಟ್ರಾಕ್ಟರ್, ಹಿಟಾಚಿ, ಜೆ.ಸಿ.ಬಿ. ಚಾಲನೆಗಾಗಿ ಬಾಲಕನಿಗೆ ಅರಸಿ ಬಂದ ಅಂತರರಾಷ್ಟ್ರೀಯ ಪ್ರಶಸ್ತಿ*
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಇನ್ನೂ 11 ವಯಸ್ಸಿನ ಬಾಲಕ ಹಾಗೂ 5ನೇ ತರಗತಿ ವಿದ್ಯಾರ್ಥಿಯಾಗಿದ್ದು,ಲೀಲಾಜಾಲವಾಗಿ ಕಾರು, ಜೀಪು, ಟ್ರಾಕ್ಟರ್ ಚಲಾಯಿಸುತ್ತಾನೆ.
ಹಿಟಾಚಿ,ಜೆಸಿಬಿಯನ್ನು ಕೂಡ ಸಲೀಸಾಗಿ ಆಪರೇಟ್ ಮಾಡುವ ಸಾಧನೆಗಾಗಿ ಮಡಿಕೇರಿ ತಾಲ್ಲೂಕು ಅಯ್ಯಂಗೇರಿ ಗ್ರಾಮದ ಗುತ್ತಿಗೆದಾರ ಕಾವೇರಿಮನೆ ಭರತ್ ಮತ್ತು ಯೋಗಿತಾ ದಂಪತಿಯ ಪುತ್ರ ಚಂದನ್ ರವರಿಗೆ ಕಳೆದ ಭಾನುವಾರ ಮೈಸೂರು ಯು.ಎನ್. ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು.