ಇತ್ತೀಚಿನ ಸುದ್ದಿ
ಸ್ಪೀಕರ್ ಯು.ಟಿ. ಖಾದರ್ ಬಾರ್ಬೋಸ್ ಪ್ರಧಾನಿ ಮಿಯಾ ಅಮೂರ್ ಮೂಟ್ಲಿ ಭೇಟಿ
10/10/2025, 19:02

ಬ್ರಿಜ್ಜಟೌನ್(reporterkarnataka.com): ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್‌ವೆಲ್ತ್ ಗಣರಾಜ್ಯವಾದ ಬಾರ್ಬೋಸ್ ದೇಶದ ರಾಜಧಾನಿ ಬ್ರಿಜ್ಜಟೌನ್ ನಗರದಲ್ಲಿ ನಡೆಯುತ್ತಿರುವ “68 ನೇ ಕಾಮನ್‌ವೆಲ್ತ್ ಸಂಸದೀಯ ಸಮಾವೇಶ” ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹಾಗೂ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರುಗಳು ಬಾರ್ಬೋಸ್ ಪ್ರಧಾನಿ ಮಿಯಾ ಅಮೂರ್ ಮೂಟ್ಲಿ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಭಾರತ ವಲಯದ ಕಾಮನ್‌ವೆಲ್ತ್ ಸಂಸದೀಯ ಸಂಘದ ಪ್ರತಿನಿಧಿಯಾಗಿ ಭಾಗವಹಿಸಿರುವ ರಾಜ್ಯದ ಲೋಕಸಭಾ ಸದಸ್ಯ ಡಾ. ಕೆ.ಸುಧಾಕರ್ ಹಾಗೂ ಇತರರಿರುವ ಉಪಸ್ಥಿತರಿದ್ದರು.