2:00 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಸೌರ ಘಟಕದ ಬೆಲೆ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿಕೆ: ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ

09/10/2025, 23:01

* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

* ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ದೇಶದಲ್ಲಿ ಸೌರಶಕ್ತಿ ಕ್ರಾಂತಿ

* ಗುಜರಾತ್‌ಗೆ ನವೀಕರಿಸಬಹುದಾದ ಇಂಧನದಿಂದಲೇ ಶೇ.60ರಷ್ಟು ವಿದ್ಯುತ್‌

* 2014ರಲ್ಲಿ 2.8GW ಇದ್ದ ಭಾರತದ ಸೌರಶಕ್ತಿ ಸಾಮರ್ಥ್ಯ 125 GWಗೆ ಏರಿಕೆ

ಅಹಮದಾಬಾದ್(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಇಂದು ಸೌರ ಕ್ರಾಂತಿಯಾಗಿದೆ. ಸೌರ ಘಟಕದ ಬೆಲೆ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಗುಜರಾತ್‌ನ ಮೆಹ್ಸಾನಾದ ಗಣಪತ್ ವಿಶ್ವವಿದ್ಯಾಲಯದಲ್ಲಿ ‘ವೈಬ್ರಂಟ್ ಗುಜರಾತ್’ ಪ್ರಾದೇಶಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆಯೇ ಸೌರಶಕ್ತಿಗೆ ನಾಂದಿ ಹಾಡಿದರು. ದೇಶದೆಲ್ಲೆಡೆ ಸೌರ ಶಕ್ತಿ ಉತ್ಪಾದನೆಗೆ ಉತ್ತೇಜನ ನೀಡಿ ಜಗತ್ತಿಗೇ ಬೆಳಕು ತೋರಿದರು ಎಂದು ನುಡಿದರು.


25 ವರ್ಷಗಳ ಹಿಂದೆ ಸೌರ ಘಟಕದ ಪ್ರತಿ ಯೂನಿಟ್‌ಗೆ ₹18 ರಿಂದ ₹20 ರಷ್ಟಿತ್ತು. ಪ್ರಧಾನಿ ಅವರ ಆಶಯದಂತೆ ಅದೀಗ ಕೇವಲ ₹2.15ಕ್ಕೆ ಇಳಿದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಇಷ್ಟು ಕನಿಷ್ಠ ಬೆಲೆಯಿದೆ. ಬ್ಯಾಟರಿ ಸಂಗ್ರಹಣೆಯೊಂದಿಗೆ ಸಹ ಪ್ರತಿ ಯೂನಿಟ್‌ಗೆ ₹2.70ನಷ್ಟು ಕಡಿಮೆ ಬೆಲೆ ದಾಖಲಾಗಿದೆ ಎಂದು ಸಚಿವ ಜೋಶಿ ವಿವರಿಸಿದರು.
ಸೌರ ಶಕ್ತಿ ಉತ್ಪಾದನೆಯನ್ನು ಆರಂಭದಲ್ಲಿ ಅನೇಕರು ಅನುಮಾನಿಸಿದರು. ಆದರಿಂದು ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತವನ್ನು ಸೌರಕ್ರಾಂತಿಯಲ್ಲಿ ಜಾಗತಿಕ ಮುಂಚೂಣಿಯಲ್ಲಿರಿಸಿದೆ ಎಂದು ಜೋಶಿ ಸಂತಸ ಹಂಚಿಕೊಂಡರು.
ಗುಜರಾತ್ ಈಗ ತನ್ನ ಸ್ಥಾಪಿತ ಸಾಮರ್ಥ್ಯದ ಶೇ.60ರಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದೆ. 2014ರಲ್ಲಿ ದೇಶದ ಒಟ್ಟು ಸೌರ ವಿದ್ಯುತ್ ಉತ್ಪಾದನೆ ಕೇವಲ 2.8 ಗಿಗಾವ್ಯಾಟ್ ಆಗಿತ್ತು. ಈಗ ಕೇವಲ ಸೌರಶಕ್ತಿಯಿಂದಲೇ 125 GW ವಿದ್ಯುತ್ ಪಡೆಯುತ್ತಿದೆ ಎಂದು ಸೌರಕ್ರಾಂತಿ ಬಗ್ಗೆ ತಿಳಿಯಪಡಿಸಿದರು.
ಮೆಹ್ಸಾನಾವನ್ನು ಶ್ಲಾಘಿಸಿದ ಜೋಶಿ, “ಮೆಹ್ಸಾನಾ ಅತ್ಯಂತ ಕ್ರಿಯಾತ್ಮಕ ಸ್ಥಳವಾಗಿದ್ದು, ಇದನ್ನು ಶುದ್ಧ ಶಕ್ತಿಯ ದಾರಿದೀಪವೆಂದು ಪರಿಗಣಿಸಲಾಗಿದೆ” ಎಂದು ಹೇಳಿದರು. ಜಿಲ್ಲೆಯ ಮೊಧೇರಾ ಬಹುಶಃ 24×7 ಶುದ್ಧ ವಿದ್ಯುತ್ ಉತ್ಪಾದಿಸುವ ವಿಶ್ವದ ಏಕೈಕ ಗ್ರಾಮವಾಗಿದೆ, ಇದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಎತ್ತಿ ತೋರಿಸಿದರು.

*ಭೂಮಿ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚು:* ನಾವು ಹೆಚ್ಚಿನ ಬೇಡಿಕೆಗಳಿಂದಾಗಿ ಪ್ರಕೃತಿ ಮತ್ತು ಜೀವವೈವಿಧ್ಯತೆಯನ್ನು ನಾಶಪಡಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿಯ ನಂತರ ಭೂಮಿಯ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಹಿಮಕರಡಿ ಮತ್ತು ಧ್ರುವ ನರಿಯಂತಹ ಜೀವಿಗಳ ಅಳಿವಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

*ಭೂಮಿ-ಜೀವ ವೈವಿಧ್ಯತೆ ರಕ್ಷಣೆ ಅಗತ್ಯ:* ತಾಪಮಾನ 1.5 ಡಿಗ್ರಿ ಏರಿಕೆಯಾಗಲು ಗರಿಷ್ಠ 7 ವರ್ಷಗಳಿವೆ. ನಾವಿದನ್ನು ದಾಟಿದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಇಂದು ಭೂಮಿಯನ್ನು ರಕ್ಷಿಸಬೇಕಾದ ಸಮಯ ಎದುರಾಗಿದ್ದು, ಜೀವವೈವಿಧ್ಯತೆಯನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು