ಇತ್ತೀಚಿನ ಸುದ್ದಿ
ರಾತ್ರಿ ವೇಳೆ ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು
27/09/2025, 16:13

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಪ್ರವಾಸಿ ಬೊಲೆರೋ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಕಳೆದ ರಾತ್ರಿ ಸಂಭವಿಸಿದೆ.
ಸುಂಟಿಕೊಪ್ಪ ಸಮೀಪದ ಬಿರ್ಚ್ ವುಡ್ ರೆಸಾರ್ಟ್ ತಿರುವಿನಲ್ಲಿ ಈ ಅಪಘಾತ ಸಂಭಾವಿಸಿದ್ದು ಅದೃಷ್ಟವಶಾತ್ ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.