7:26 AM Friday3 - October 2025
ಬ್ರೇಕಿಂಗ್ ನ್ಯೂಸ್
ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ…

ಇತ್ತೀಚಿನ ಸುದ್ದಿ

ಗೊಂದಲದ ಲೀಡರ್‌-ಕೆಡರ್‌ನಿಂದ ಹೊರಬರಲಿ ಕಾಂಗ್ರೆಸ್‌: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

26/09/2025, 23:20

* Next Gen Gst ಆಕ್ಷೇಪಿಸುವ ಕಾಂಗ್ರೆಸ್ಸಿಗರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ

* ಜಿಎಸ್‌ಟಿ ಕಡಿತಕ್ಕೆ ನಾವೇ ಹೇಳಿದ್ದೆವು ಎನ್ನುವ ಕಾಂಗ್ರೆಸ್ಸಿಗರಿಂದ ಈಗೇಕೆ ವಿರೋಧ?

* ಕಾಂಗ್ರೆಸ್‌ ಆಡಳಿತದಲ್ಲಿ 17 ತೆರಿಗೆ, 7 ಸೆಸ್‌ಗಳಿದ್ದವು; ಈಗಿರುವುದು GST ಒಂದೇ.

* 2017ಕ್ಕೂ ಮೊದಲು ಶೇ.30ರಿಂದ 35ರಷ್ಟು ತೆರಿಗೆ ವ್ಯವಸ್ಥೆಯಿತ್ತು; ಇದೀಗ ಶೇ.9ಕ್ಕಿಳಿದಿದೆ

ಬೀದರ್‌(reporterkarnataka.com): ʼಗೊಂದಲದ ಲೀಡರ್‌, ಗೊಂದಲದ ಕೆಡರ್‌ನಿಂದ ಕಾಂಗ್ರೆಸ್‌ ಪಕ್ಷವೇ ಗೊಂದಲದ ಗೂಡಾಗಿದ್ದು, ಮೊದಲು ಇದರಿಂದ ಹೊರಬರಲಿʼ ಎಂದು ́Next Gen Gstʼಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದ್ದಾರೆ.
ಬೀದರ್‌ನಲ್ಲಿ ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್‌ ಯಾವುದೇ ಒಂದು ನಿಲುವಿಗೆ ಬದ್ಧವಾಗಿರಲಿ. ಕೇಂದ್ರ ಸರ್ಕಾರ GST ಕಡಿತಗೊಳಿಸುತ್ತಿದ್ದಂತೆ ಕಾಂಗ್ರೆಸ್‌ ಒಮ್ಮೆ ʼನಾವೇ ಹೇಳಿದ್ದೇವು-ನಾವು ಹೋರಾಟ ಮಾಡಿದ್ದೆವುʼ ಎನ್ನುತ್ತಿದೆ. ಮತ್ತೊಂದೆಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. Gst ಕಡಿತಕ್ಕೆ ಅವರೇ ಹೇಳಿದ ಮೇಲೆ ಈಗ ವಿರೋಧವೇಕೆ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ 17 ತೆರಿಗೆಗಳು ಮತ್ತು 7 ಶುಲ್ಕಗಳಿದ್ದವು. ಒಂದು ದೋಸೆ, ರೊಟ್ಟಿ ತಿಂದರೂ ಶೇ.20-30ರಷ್ಟು ತೆರಿಗೆ ಕಟ್ಟಬೇಕಿತ್ತು. ಒಂದು ಬೈಕ್‌ ಖರೀದಿಸಿದರೆ 12ರಿಂದ 15 ಸಾವಿರವರೆಗೆ ಟ್ಯಾಕ್ಸ್‌ ಕಟ್ಟಬೇಕಿತ್ತು, ಅದೀಗ 5000ಕ್ಕೆ ಇಳಿದಿದೆ. ಹೀಗೆ ಜನೋಪಯೋಗಿ ವಸ್ತುಗಳ ಬೆಲೆಯೂ ಇಳಿದಿದೆ. ವಾಸ್ತವ ಹೀಗಿರುವಾಗ ನೀವೇನು ಮಾತನಾಡುತ್ತಿದ್ದೀರಿ ಎಂಬ ಅರಿವಿದೆಯೇ? ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು ಸಚಿವ ಜೋಶಿ.

*ಜನರಿಗಾಗಿಯೇ ಐತಿಹಾಸಿಕ ತೀರ್ಮಾನ:* 2017ಕ್ಕೂ ಮೊದಲು ದೇಶದಲ್ಲಿ 30ರಿಂದ 35 ಪರ್ಸೆಂಟ್‌ ತೆರಿಗೆ ವ್ಯವಸ್ಥೆಯಿತ್ತು. ಇದೀಗ ಸರಾಸರಿ ಶೇ.9ಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಮೊದಲು ಚತುಸ್ಥರದ GST ಜಾರಿಗೊಳಿಸಿ ಆರ್ಥಿಕ ಸ್ಥಿರತೆಗೆ ಶ್ರಮಿಸಲಾಯಿತು. ಇದೀಗ ದ್ವಿಸ್ಥರಕ್ಕೆ ಇಳಿಸಿರುವುದು ಜನರಿಗಾಗಿಯೇ. ಜನರ ಹೊರೆ ಕಡಿಮೆ ಮಾಡಲು ಈ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆಂದು ಸ್ಪಷ್ಟಪಡಿಸಿದರು.

*ರಾಜಕೀಯ ಕಾರಣಕ್ಕೆ ವಿರೋಧಿಸಬೇಡಿ:* Next Gen Gstಯನ್ನು ಕಾಂಗ್ರೆಸ್‌ ಪಕ್ಷ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದೆ. ಮೊದಲು ಇದನ್ನು ಬಿಡಲಿ. ರಾಜ್ಯ ಸರ್ಕಾರವೂ ಸೇರಿದಂತೆ ಕಾಂಗ್ರೆಸ್ ಮೊದಲು ಗೊಂದಲಗಳಿಂದ ಹೊರಬರಲಿ ಎಂದು ಸಲಹೆ ನೀಡಿದರು.
ಜಿಎಸ್‌ಟಿ ಕಡಿತದಿಂದ ರಾಜ್ಯಗಳಿಗೆ ನಷ್ಟ ಉಂಟಾಗುತ್ತದೆ ಎಂಬ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆರೋಪದಲ್ಲಿ ಹುರುಳಿಲ್ಲ. ಬೆಲೆ ಇಳಿಕೆಯಿಂದ ಸಹಜವಾಗಿಯೇ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಆರ್ಥಿಕತೆ ಹೆಚ್ಚುತ್ತದೆ, ಉತ್ಪಾದನೆ-ಉದ್ಯೋಗ ಹೆಚ್ಚಳವಾಗುತ್ತದೆ. ಇದರಿಂದ ಜಿಎಸ್‌ಟಿ ಸಂಗ್ರಹವೂ ಏರಿಕೆಯಾಗಿ ಆರ್ಥಿಕ ಸ್ಥಿರತೆ ಕಾಣುತ್ತದೆ. ಕಾಂಗ್ರೆಸ್ಸಿಗರಿಗೆ ಇಷ್ಟು ತಿಳಿವಳಿಕೆಯಿಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.
ʼNext gen Gstʼ ಸ್ವಾತಂತ್ರ್ಯಾ ನಂತರ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆಯಾಗಿದೆ. ಆಹಾರೋತ್ಪನ್ನಗಳು ಶೂನ್ಯ ತೆರಿಗೆ, ಶಾಂಪು, ಸೋಪ್‌, ಬ್ರೆಷ್‌, ಪೇಸ್ಟ್‌ ಹೀಗೆ ಹಲವು ದಿನಬಳಕೆ ವಸ್ತುಗಳೂ ಶೂನ್ಯ ಮತ್ತು ಶೇ.5ರ ತೆರಿಗೆ ವ್ಯಾಪ್ತಿಗೆ ಬರುತ್ತಿವೆ. ಕೃಷಿ ಮತ್ತು ನವೀಕರಿಸಬಹುದಾದ ಇಂಧನ ಪರಿಕರಗಳೂ ಶೇ.5ರ ವ್ಯಾಪ್ತಿಗೆ ಬರುತ್ತಿದ್ದು, ದೇಶದ ಜನತೆಗೆ ಇದು ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.
ರಾಜ್ಯ ಸರ್ಕಾರಗಳು ಸರಿಯಾಗಿ ಯೋಜನೆ ರೂಪಿಸಿದರೆ ವಿದ್ಯುತ್‌ ಉತ್ಪಾದನೆ ದರ ಮತ್ತು ವಿದ್ಯುತ್‌ ಶುಲ್ಕ ಕಡಿಮೆಗೊಳಿಸಬಹುದು. ಮಹಾರಾಷ್ಟ್ರದಲ್ಲಿ ಸೋಲಾರ್‌ ಅಳವಡಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪರಿಣಾಮ ಅಲ್ಲಿ ವಿದ್ಯುತ್‌ ಶುಲ್ಕವೂ ಕಡಿತಗೊಳ್ಳುತ್ತಿದೆ. ಪಿಎಂ ಕುಸುಮ್‌ ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ರೈತರ ಸಬಲೀಕರಣವಾಗುತ್ತಿದೆ ಎಂದು ಹೇಳಿದರು.

*3ನೇ ಅತಿದೊಡ್ಡ ಆರ್ಥಿಕ ಶಕ್ತಿಗೆ ಪ್ರೇರಣೆ:* ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಜಾರಿಗೊಳಿಸಿದ್ದರಿಂದ ಜನಸಾಮಾನ್ಯರಿಗೆ ಹತ್ತು ವರ್ಷದ ಹಿಂದಿದ್ದ ತೆರಿಗೆ ಹೊರೆ ಇಳಿದಿದೆ. ದೇಶವೂ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಇದೀಗ Next Gen Gstಯಿಂದ ಜನರಿಗೆ ಬೆಲೆ ಅಗ್ಗವಾಗಿ ಇನ್ನೂ ಹೆಚ್ಚಿನ ಅನುಕೂಲವಾಗುವುದಲ್ಲದೆ, ದೇಶವೂ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು