ಇತ್ತೀಚಿನ ಸುದ್ದಿ
ಕುದ್ರೋಳಿ ಕ್ಷೇತ್ರದ ಕಾಳಭೈರವ ದೇವರಿಗೆ 9 ಲಕ್ಷ ರೂ. ವೆಚ್ಚದ ಬೆಳ್ಳಿಯ ಪ್ರಭಾವಳಿ ಸಮರ್ಪಣೆ
26/09/2025, 16:53

ಮಂಗಳೂರು(reporterkarnataka.com): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಕಾಳಭೈರವ ದೇವರಿಗೆ ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ 6 ಕೆಜಿ ತೂಕ ಬೆಳ್ಳಿಯ ಪ್ರಭಾವಳಿ ಅರ್ಪಿಸಲಾಗಿದೆ.
ಕುದ್ರೋಳಿ ಕ್ಷೇತ್ರದ ಸ್ಥಾಪಕ ಅಧ್ಯಕ್ಷ ಸಾಹುಕಾರ್ ಕೊರಗಪ್ಪರವರ ಪುತ್ರ ದಿ.ಸೋಮಸುಂದರಂ ಕುಟುಂಬಸ್ಥರು ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ 6 ಕೆ.ಜಿ. ತೂಕ ಬೆಳ್ಳಿಯ ಪ್ರಭಾವಳಿಯನ್ನು ಕೊಡುಗೆಯಾಗಿ ಶುಕ್ರವಾರ ನೀಡಿದ್ದಾರೆ.
ದಿ. ಸೋಮಸುಂದರಂ ಅವರು ಸುಮಾರು 34 ವರ್ಷ ಕ್ಷೇತ್ರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರ ಕಿರಿಯ ಪುತ್ರ ಜೈರಾಜ್ ಎಚ್. ಸೋಮಸುಂದರಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ.ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ.ಸುವರ್ಣ, ಸದಸ್ಯರಾದ ಗೌರವಿ ರಾಜಶೆರಖರ್, ಲತೀಶ್ ಸುವರ್ಣ, ಭಕ್ತರು ಪಾಲ್ಗೊಂಡಿದ್ದರು.