ಇತ್ತೀಚಿನ ಸುದ್ದಿ
ಕುಶಾಲನಗರ – ಕೊಪ್ಪ ಗಡಿ ಭಾಗದ ಕಾವೇರಿ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ
26/09/2025, 16:48

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ – ಕೊಪ್ಪ ಗಡಿಭಾಗದ ಕಾವೇರಿ ನದಿ ಸೇತುವೆ ಕೆಳ ಭಾಗದಲ್ಲಿ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದೆ.
ಸುಮಾರು 15 ಅಡಿಗಿಂತಲೂ ಉದ್ದದ ಭಾರಿ ಗಾತ್ರದ ಮೊಸಳೆ ಬಿಸಿಲಿಗೆ ಮಯೋಡ್ಡಿ ದಿನವಿಡಿ ವಿಶ್ರಾಂತಿ ಪಡೆದಂತೆ ಕಂಡು ಬರುತಿತ್ತು. ಇದರೊಂದಿಗೆ ಮತ್ತೊಂದು ಬೃಹತ್ ಮೊಸಳೆ ಆಗಿಂದಾಗ್ಗೆ ನದಿಯಿಂದ ಮೇಲೆ ಬಂದು ದರ್ಶನ ನೀಡುತ್ತಿತ್ತು. ಇದನ್ನು ಕಂಡ ಹೆದ್ದಾರಿ ರಸ್ತೆಯ ವಾಹನ ಚಾಲಕರು ಸೇತುವೆ ಮೇಲೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಮೊಸಳೆಯನ್ನು ನೋಡುವ ತವಕದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.