9:02 AM Friday3 - October 2025
ಬ್ರೇಕಿಂಗ್ ನ್ಯೂಸ್
ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ…

ಇತ್ತೀಚಿನ ಸುದ್ದಿ

Mangaluru | ಕೆಲರಾಯ್ ಚರ್ಚ್ ನಲ್ಲಿ ಲಾಯಿಕೋತ್ಸವ್ 2025

26/09/2025, 14:22

ಮಂಗಳೂರು(reporterkarnataka.com): ಮಂಗಳೂರು ತಾಲೂಕಿನ ಕೆಲರಾಯ್ ಸೈಂಟ್ ಆ್ಯನ್ಸ್ ಚರ್ಚ್ ಮತ್ತು ಕ್ಯಾಥೊಲಿಕ್ ಸಭಾ ಕೆಲರಾಯ್‌ ಘಟಕದ ವತಿಯಿಂದ ಲಾಯಿಕೋತ್ಸವ್ 2025 ರವಿವಾರ ಚರ್ಚ್ ನ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಚಾರೆಟೆಬಲ್‌ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ತಿನ್‌ ಲೂಕಸ್ ಲೋಬೊ ಅವರು ಉದ್ಘಾಟಿಸಿದರು,
ಕೆಲರಾಯ್‌ ಚರ್ಚ್‌ನ ಧರ್ಮಗುರು ವಂದನೀಯ ಫಾ. ಸಿಲ್ವೆಸ್ಟರ್ ಡಿ’ಕೋಸ್ಟಾ ಅಧ್ಯಕ್ಷತೆ ವಹಿಸಿದ್ದರು.
ಕ್ಯಾಥೊಲಿಕ್‌ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಮಂಗಳೂರು ಧರ್ಮ ಪ್ರಾಂತ್ಯದ ಪಾಲನಾ ಪರಿಷತ್ತಿನ ಕಾರ್ಯದರ್ಶಿ ಜಾನ್ ಡಿ’ಸಿಲ್ವಾ, ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟೆಲಿನೊ, ಕ್ಯಾಥೊಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷೆ ವಿಲ್ಮಾ ಮೊಂತೆರೊ, ಐಎಫ್‌ಕೆಸಿಎ ಕರ್ನಾಟಕ ಇದರ ಸಂಚಾಲಕ ಡೆನಿಸ್ ಡಿ’ಸಿಲ್ವಾ, ಕ್ಯಾಥೊಲಿಕ್ ಸಭಾ ಮಾಜಿ ಅಧ್ಯಕ್ಷ ರೋಲ್ಫಿ ಡಿ’ಕೋಸ್ತಾ, ಕ್ಯಾಥೊಲಿಕ್ ಸಭಾ ರಾಜಕೀಯ ವಿಭಾಗದ ಸಂಚಾಲಕ ಸ್ಟ್ಯಾನಿ ಲೋಬೊ, ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ವಿಜಯಕ್ರಾಂತಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಐದು ಚರ್ಚ್ ಗಳ ಪಾಲನಾ ಸಮಿತಿಗಳ ಉಪಾಧ್ಯಕ್ಷರು, ಕ್ಯಾಥೋಲಿಕ್ ಸಭಾ ಅಧ್ಯಕ್ಷರು, ಧರ್ಮಗುರುಗಳು ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೆಲರಾಯ್, ಪಾಲ್ದನೆ, ನೀರ್‌ಮಾರ್ಗ, ವಾಮಂಜೂರು ಮತ್ತು ಫೆರ್ಮಾಯ್‌ ಚರ್ಚ್ ಗಳ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಐದು ಚರ್ಚ್ ಗಳ ವ್ಯಾಪ್ತಿಯ ಸರಕಾರಿ ನೌಕರರು, ಮಾಜಿ ಸೈನಿಕರು ಮತ್ತು ಚುನಾಯಿತ ಪಂಚಾಯತ್ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಸಿಪಿ ವಿಜಯಕ್ರಾಂತಿ ಅವರು- ಸೈಬರ್ ಅಪರಾಧ ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು, ಮಾಜಿ ಸಿವಿಲ್ ನ್ಯಾಯಾಧೀಶರಾದ ವಿಜೇತಾ ಪಿಂಕಿ ಡೆ’ಸಾ ಅವರು ಆಸ್ತಿ ವಿಷಯಗಳು ಮತ್ತು ಕಾನೂನು ದಾಖಲಾತಿ ಕುರಿತು, ಗಾಡ್ವಿನ್ ಪಿಂಟೊ ಅವರು ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ, ವಕೀಲ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಸುಧೀರ್ ಕುಮಾರ್ ಅವರು ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳು, ಪತ್ರಕರ್ತ ವಿಲ್ಫ್ರೆಡ್ ಡಿ’ಸೋಜಾ ಅವರು ಪಂಚಾಯತ್ ಸಭೆಗಳಲ್ಲಿ ಭಾಗವಹಿಸುವಿಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು