ಇತ್ತೀಚಿನ ಸುದ್ದಿ
Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ
09/09/2025, 13:33

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterterkarnataka@gmail.com
ಕೋಣಗಳನ್ನು ಕಂಟೈನರ್ ಲಾರಿ ನಲ್ಲಿ ತುಂಬಿಕೊಂಡು ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗೋಣಿಕೊಪ್ಪ ಬಳಿಯ ಮತ್ತಿಗೋಡು ಬಳಿ ನಡೆದಿದೆ.
15 ಮರಿ ಸೇರಿದಂತೆ ಬಲಿಷ್ಠ 34 ಕೋಣಗಳನ್ನು ತುಂಬಿಕೊಂಡಿದ್ದ ಕಂಟೈನರ್ ಮತ್ತಿಗೋಡು ಚೆಕ್ ಪೋಸ್ಟ್ ದಾಟಿ ಆನೆ ಶಿಬಿರ ಸಮೀಪ ಆಗಮಿಸುತ್ತಿದ್ದಂತೆ ವಿರಾಜಪೇಟೆ ಉಪ ಪೊಲೀಸ್ ಉಪಾಧಿಕ್ಷ ಮಹೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸದ್ಯ 34 ಕೋಣಗಳು ಪೊಲೀಸರ ವಶದಲ್ಲಿದೆ.