1:45 AM Tuesday2 - September 2025
ಬ್ರೇಕಿಂಗ್ ನ್ಯೂಸ್
ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ… ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್… ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ… Kaali river | ಸೂಪಾ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆ: ಪ್ರವಾಹದ ಕುರಿತು… ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ: ಸಿಎಂ ಚಾಲನೆ ಧರ್ಮಸ್ಥಳ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗಲಾರದು: ಸಿಎಂ ಸಿದ್ದರಾಮಯ್ಯ ಗಣೇಶ ವಿಸರ್ಜನೆ: ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದ 5 ಡಿಜೆ ವಾಹನ ಪೊಲೀಸ್ ವಶಕ್ಕೆ ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ… ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ

ಇತ್ತೀಚಿನ ಸುದ್ದಿ

ಮೊಂತಿ ಹಬ್ಬ: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ನವದಿನಗಳ ನೊವೆನಾಗಳಿಗೆ ಚಾಲನೆ

31/08/2025, 14:54

ಮಂಗಳೂರು(reporterkarnataka.com): ಮೊಂತಿಹಬ್ಬ(ಕನ್ಯಾ ಮರಿಯಮ್ಮ ಹಬ್ಬ)ದ ಅಂಗವಾಗಿ ನವದಿನಗಳ ಪ್ರಾರ್ಥನಾ ವಿಧಿಗಳಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು.


ನವ ದಿನಗಳ ಪ್ರಾರ್ಥನಾವಿಧಿ ಮುಗಿದ ಬಳಿಕ ಸೆ.8ರಂದು ಮೊಂತಿ ಹಬ್ಬ( ಕುರಲ್ ಪರ್ಬ)ವನ್ನು ಕ್ರೈಸ್ತ ಸಮುದಾಯದವರು ಆಚರಣೆ ಮಾಡಲಿದ್ದಾರೆ. ಈ ನವ ದಿನಗಳ ನೊವೆನಾ ಸಮಯದಲ್ಲಿ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮ ರಿಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಪ್ರಕೃತಿಯ ಆರಾಧನೆಗೆ ಸಾಕ್ಷಿಯಾದರು.
ನಗರದ ಉರ್ವ ಚರ್ಚಿನಲ್ಲಿ ಜಪಮಾಲೆಯ ಬಳಿಕ ನಡೆದ ಕೃತಜ್ಞತಾ ಪೂಜೆಯಲ್ಲಿ ಚರ್ಚಿನ ಧರ್ಮಗುರು ಫಾ. ಮೈಕಲ್ ಲೋಬೋ ಪ್ರವಚನ ನೀಡಿ, ದೇವರು ಭಕ್ತರಲ್ಲಿ ವಿಧೇಯತೆಯನ್ನು ಬಯಸುತ್ತಾನೆ. ಹೊರಗಿನ ಆಡಂಬರಕ್ಕಂತ ಹೆಚ್ಚಾಗಿ ಹೃದಯದಲ್ಲಿರುವ ಭಕ್ತಿಯನ್ನು ಬಯಸುತ್ತಾನೆ. ಮಹಾತ್ಮಗಾಂಧೀಜಿ, ಮದರ್ ತೆರೇಸಾ, ಸಂತ ಫ್ರಾನ್ಸಿಸ್ ಅಸೀಸಿಯಂತಹ ಮಹಾನ್ ಪುರುಷರು ಇಂದಿಗೂ ಸಮಾಜಕ್ಕೆ ಮಾದರಿಯಾಗಿರುವುದು ಅವರಲ್ಲಿ ತುಂಬಿರುವ ವಿಧೇಯತೆಯಿಂದ ಭಕ್ತರು ಕೂಡ ಇತರರನ್ನು ಗೌರವಿಸುವ ವಿಧೇಯತೆ ತೋರುವ ಕರ‍್ಯದಿಂದ ದೇವರು ಸಂತೃಪ್ತನಾಗುತ್ತಾನೆ ಎಂದರು. ಈ ಸಂದರ್ಭ ಫಾ. ಮೌರಿಸ್ ಕೃತಜ್ಞತಾ ಪೂಜೆಯಲ್ಲಿ ಉಪಸ್ಥಿತರಿದ್ದರು. ಈ ಬಳಿಕ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ನೊವೆನಾ ಪ್ರಾರ್ಥನಾವಿಧಿಯನ್ನು ನಡೆಸಿಕೊಟ್ಟರು. ಕನ್ಯಾ ಮರಿಯಮ್ಮಳಿಗೆ ಪುಷ್ಪ ಅರ್ಪಣೆ ಮಾಡಿದ ಮಕ್ಕಳಿಗೆ ಹಾಗೂ ಹಿರಿಯರಿಗೆ ಸಿಹಿತಿಂಡಿ ನೀಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು