8:49 PM Tuesday26 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

America | ‘ರಮೇಶ್ ಅರವಿಂದ್ ಡೇ’: ಅಮೆರಿಕದ ಟೆಕ್ಸಸ್ ಆಸ್ಟಿನ್ ಪಟ್ಟಣದ ಜನತೆಯಿಂದ ಕನ್ನಡದ ಖ್ಯಾತ ನಟನಿಗೆ ಗೌರವ

26/08/2025, 15:52

ಟೆಕ್ಸೆಸ್(reporterkarnataka.com): ಅಮೆರಿಕದ ಟೆಕ್ಸೆಸ್, ಆಸ್ಟಿನ್ ನಗರದಲ್ಲಿ ನಡೆದ “ಡೇ ಆಫ್ ಗ್ರಾಟಿಟ್ಯೂಡ್ 2025” ಸಮಾರಂಭದಲ್ಲಿ ರಮೇಶ್ ಅರವಿಂದ್ ಇವರ ಜೀವನ ಅನುಭವದ -ನಟನೆ, ನಿರ್ದೇಶನ ಮತ್ತು ಸಿನಿಮಾ ಹಾಗೂ ತನ್ನ ಸ್ಪೂರ್ತಿದಾಯಕ ಮಾತುಗಳಿಂದ ಜನ-ಮಾನಸದಲ್ಲಿ ಬೆಳೆದು ನಿಂತ ಕಾರಣಕ್ಕಾಗಿ “ರಮೇಶ್ ಅರವಿಂದ್ ಡೇ” ಆಚರಿಸಿ ಅವರನ್ನು ಗೌರವಿಸಲಾಯಿತು.
ಆಸ್ಟಿನ್ ನಗರದ “ಪ್ರೋಕ್ಲಮೇಷನ್ ಡೇ” ದಿನದಂದು ಅಲ್ಲಿನ ಮೇಯರ್, ಪ್ರೊಟೆಮ್ ವನೀಸಾ ಇವರು ಟೆಕ್ಸನ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶದ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.

ಗ್ರಾಟಿಟ್ಯೂಟ್ ಡೇ , ಸಂಸ್ಥಾಪಕ ಎಂ. ಜೆ. ಚಾರ್ಮನಿ ಇವರ ಸ್ವಾಗತದೊಂದಿಗೆ .ಅಗಸ್ಟ್ 23 ರಂದು , ಸಾವಿರಾರು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಆಸ್ಟಿನ್ ನಗರದ ಚೀಫ್ ಲರ್ನಿಂಗ್ ಆಫೀಸರ್, ಮೀಚಲೇ ಲಾ ಟೋರನ್ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದ್, “ಈ ಕಾರ್ಯಕ್ರಮ ನನ್ನ ಜೀವನದ ಅಭೂತಪೂರ್ವ ಕ್ಷಣ. ಇದನ್ನು ನಾನು ಮರೆಯಲಾರೆ” ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು