ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ: ಎಸ್ಐಟಿ ತಂಡದಿಂದ ಸೌಜನ್ಯ ಪರ ಹೋರಾಟಗಾರ ತಿಮರೋಡಿ ಮನೆಗೆ ಎಂಟ್ರಿ; ಸ್ಥಳ ಮಹಜರು
26/08/2025, 13:49

ಉಜಿರೆ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಡಿ
ತಿಮರೋಡಿ ಅವರ ಉಜಿರೆ ಸಮೀಪದ ಮನೆಗೆ ಎಂಟ್ರಿ ಕೊಟ್ಟಿದೆ.
ಸರ್ಚ್ ವಾರಂಟ್ ಮೂಲಕ ಎಸ್ಐಟಿ ಹಿರಿಯ ಅಧಿಕಾರಿಗಳು ತಿಮರೋಡಿ ಮನೆಗೆ ಪ್ರವೇಶ ಮಾಡಿದ್ದಾರೆ. ಸಾಕ್ಷಿದಾರ, ದೂರುದಾರ ಹಾಗೂ ಆರೋಪಿ ಆಗಿರುವ ಚಿನ್ನಯ್ಯನನ್ನು ಎಸ್ಐಟಿ ತಂಡ ಸ್ಥಳ ಮಹಜರು ನಡೆಸಲು ತಿಮರೋಡಿ ಮನೆಗೆ ಕರೆದು ತಂದಿದೆ.
ದೂರುದಾರ ತಾನು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡವು ಇಂದು ಬೆಳಗ್ಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ತಿಮರೋಡಿ ಮತ್ತು ಅವರ ಸಹೋದರ ಮೋಹನ್ ಶೆಟ್ಟಿ ಅವರ ಮನೆಗೆ ಬಂದಿದ್ದಾರೆ.
ಬೆಳ್ತಂಗಡಿ ನ್ಯಾಯಾಧೀಶರಿಂದ ಆ.25 ರಂದು ಸರ್ಚ್ ವಾರೆಂಟ್ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಜೊತೆಯಲ್ಲಿ ಕರೆದುಕೊಂಡು ತಿಮರೋಡಿ ಮನೆಗೆ ಬಂದಿದ್ದು, ಮಹಜರು ನಡೆಸುತ್ತಿದ್ದಾರೆ.