ಇತ್ತೀಚಿನ ಸುದ್ದಿ
ಪದ್ಮಭೂಷಣ ಪುರಸ್ಕೃತ ಚಲನಚಿತ್ರ ನಟ ಅನಂತನಾಗ್ ಅವರಿಗೆ ಕೇಂದ್ರ ಸಚಿವ ಜೋಶಿ ಸನ್ಮಾನ
23/08/2025, 12:37

ಬೆಂಗಳೂರು(reporterkarnataka.com): ಇಂದು ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟ, ಪದ್ಮಭೂಷಣ ಡಾ. ಅನಂತನಾಗ್ ಅವರೊಂದಿಗೆ ‘ಒಂದು ಕಲಾತ್ಮಕ ಸಂಜೆ’ ಕಾರ್ಯಕ್ರಮದಲ್ಲಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸನ್ಮಾನಿಸಿದರು.
75ರ ವಯಸ್ಸಿನಲ್ಲೂ ಅನಂತನಾಗ್ ಅವರು ಚಿತ್ರರಂಗದಲ್ಲಿ ಉತ್ಸಾಹಿಯಾಗಿ, ಕ್ರಿಯಾಶೀಲರಾಗಿದ್ದಾರೆ. ಅನಂತನಾಗ್ ಅತ್ಯುತ್ತಮ ನಟನೆಯ ಕನ್ನಡಿಗರ ಮನಗೆದ್ದಿದ್ದು, ಸಿನಿ ರಸಿಕರನ್ನು ರಂಜಿಸಿದ್ದಾರೆ ಎಂದು ಜೋಶಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನಂತನಾಗ್ ಅವರ ಪತ್ನಿ ಹಾಗೂ ಹಿರಿಯ ಕಲಾವಿದೆ ಗಾಯತ್ರಿ ಅನಂತನಾಗ್ ಹಾಗೂ ಗಣಪತಿ ಭಟ್ ಸೇರಿದಂತೆ ಚಿತ್ರರಂಗದ ಕಲಾವಿದರು ಉಪಸ್ಥಿತರಿದ್ದರು.