2:41 AM Thursday29 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ರಾಜ್ಯಾದ್ಯಂತ ವರ ಮಹಾಲಕ್ಷ್ಮಿ ಹಬ್ಬ ಆಚರಣೆ: ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧಡೆ ಸಂಭ್ರಮ

08/08/2025, 21:21

ಬೆಂಗಳೂರು(reporterkarnataka.com): ರಾಜ್ಯಾದ್ಯಂತ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ರಾಜಧಾನಿ ಬೆಂಗಳೂರಿನ‌ ನಾನಾ ದೇಗುಲಗಳಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಸಲಾಯಿತು. ಹೆಂಗಳೆಯರು ವ್ರತ ಆಚರಿಸಿ ಲಕ್ಷ್ಮೀದೇವಿಯ ಆಶೀರ್ವಾದ ಬೇಡಿಕೊಂಡರು.
ಮೈಸೂರು, ಹುಬ್ಬಳ್ಳಿ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಬ್ಬ ಆಚರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ
ಕೊಟ್ಟಿಗೆಹಾರ ಪಟ್ಟಣ ಸೇರಿದಂತೆ ಬಣಕಲ್, ಬಾಳೂರು ಸುತ್ತಮುತ್ತ ವರಮಹಾಲಕ್ಷ್ಮಿ ಹಬ್ಬವನ್ನು ಗೃಹಿಣಿಯರು ಸಂಭ್ರಮದಿಂದ ಆಚರಿಸಿದರು. ಮಹಿಳೆಯರು ಮುಂಜಾನೆಯೇ ಎದ್ದು ಸ್ನಾನ ಮಡಿಯಾಗಿ ಉಪವಾಸ ವ್ರತ ಆಚರಿಸಿದರು. ಮನೆಯಲ್ಲಿ ಕಲಶ ಸ್ಥಾಪಿಸಿ ದೇವಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಿದರು. ದೇವಿಯ ಮುಂದೆ ಹಣವನ್ನು ಇಟ್ಟು ಪೂಜಿಸಿದರು. ಈ ಹಬ್ಬವು ಕುಟುಂಬದಲ್ಲಿ ಸುಖ,ಶಾಂತಿ,ನೆಮ್ಮದಿ,ಧನ,ದಾನ್ಯ ಸಂಪತ್ತು ಹೆಚ್ಚಾಗಲೆಂದು ಮನೆಯ ಮಹಿಳೆಯರು ಪ್ರಾರ್ಥಿಸಿದರು. ಹೆಣ್ಣು ಮಕ್ಕಳಿಗೆ, ಮುತ್ತೈದೆಯರಿಗೆ ಅರಿಶಿಣ,ಕುಂಕುಮ, ಬಳೆ ನೀಡುವ ಪದ್ದತಿಯೂ ಆಚರಣೆಯಲ್ಲಿದೆ. ಕೊಟ್ಟಿಗೆಹಾರದ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಮಹಿಳೆಯರು ಸೇರಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ಅತ್ತಿಗೆರೆಯಲ್ಲಿ ಗೃಹಿಣಿಯರಾದ ಸಾವಿತ್ರಿ, ಜ್ಯೋತಿ ಹಾಗೂ ಮತ್ತಿತರರು ಸೇರಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ಹಂಚಿದರು.

ಇತ್ತೀಚಿನ ಸುದ್ದಿ

ಜಾಹೀರಾತು