ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ: ಅಸ್ತಿಪಂಜರಗಳ ಪತ್ತೆಗೆ ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ ತಂತ್ರಜ್ಞಾನ ಬಳಕೆಗೆ ಎಸ್ಐಟಿ ಸಿದ್ದತೆ
07/08/2025, 14:00

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತಿಟ್ಟ ಶವಗಳ ಅಸ್ತಿಪಂಜರಗಳ ಪತ್ತೆಗಾಗಿ ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್(ಜಿಪಿಆರ್) ತಂತ್ರಜ್ಞಾನ ಬಳಸುವ ಕುರಿತು ವಿಶೇಷ ತನಿಖಾ ತಂಡ(ಎಸ್ಐಟಿ) ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಐಟಿ ಈಗಾಗಲೇ 12 ಸ್ಪಾಟ್ ಗಳ ಉತ್ಖನನ ಕಾರ್ಯ ಪೂರ್ಣಗೊಳಿಸಿದೆ. ಬಂಗ್ಲಗುಡ್ಡೆಯಲ್ಲಿ ಅಸ್ತಿಪಂಜರ ದೊರೆತ ಬಳಿಕ 13ನೇ ಸ್ಪಾಟ್ ಉತ್ಖನನಕ್ಕೆ ಜಿಪಿಆರ್ ತಂತ್ರಜ್ಞಾನ ಬಳಕೆಗೆ ಸಿದ್ದತೆ ನಡೆಸಿದೆ.
ಸ್ಪಾಟ್ ನಂಬರ್ 13ರಲ್ಲಿ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಸಂಪರ್ಕದ ವಯರ್ ಗಳು ಹಾದು ಹೋಗಿರುವುದರಿಂದ ಇಲ್ಲಿ ಮಾನವ ಶ್ರಮದ ಮೂಲಕ ಅಥವಾ ಹಿಟಾಚಿ ಬಳಕೆ ಸ್ವಲ್ಪ ಕಷ್ಟಕರವೆನಿಸಿದೆ. ಅದಲ್ಲದೆ ಬಂಗ್ಲಗುಡ್ಡೆಯಲ್ಲಿ ಇನ್ನಷ್ಟು ಶೋಧಕ್ಕೆ ಆಧುವಿಕ ತಂತ್ರಜ್ಞಾನದ ಬಳಕೆಗೆ ಎಸ್ಐಟಿ ಮುಂದಾಗಿ ಎನ್ನಲಾಗಿದೆ.