ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ: ಅಜಯ್ ಅಂಚನ್ ಸಹಿತ 4 ಮಂದಿ ಯೂಟ್ಯೂಬರ್ ಗಳ ಮೇಲೆ ಗೂಂಡಾಗಳ ಹಲ್ಲೆ; ಕೊಂಚ ಕಾಲ ಉದ್ವಿಗ್ನ ಸ್ಥಿತಿ
06/08/2025, 20:58

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಕುರಿತು ಎಸ್ಐಟಿ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದಂತೆ, ಇತ್ತ ಬುಧವಾರ ಸಂಜೆ 4 ಮಂದಿ ಯೂಟ್ಯೂಬರ್ ಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಕೊಂಚ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡ್ಲ ರಾಂಪೇಜ್ ನ ಅಜಯ್ ಅಂಚನ್ ಸೇರಿದಂತೆ ನಾಲ್ವರು ಯೂಟ್ಯೂಬರ್ ಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸಿದೆ. ಗಾಯಾಳುಗಳನ್ನು ಉಜಿರೆ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಭಿಷೇಕ್ ಮತ್ತು ವಿಜಯ್ ಹಾಗೂ ಇನ್ನೊಬ್ಬರು ಇತರ ಮೂವರು ಹಲ್ಲೆಗೊಳಗಾದ ಯೂಟ್ಯೂಬರ್ ಗಳೆಂದು ತಿಳಿದು ಬಂದಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ಬಳಿ ಈ ನಾಲ್ವರು ಯೂಟ್ಯೂಬರ್ ಗಳ ಮೇಲೆ ಗೂಂಡಾಗಳ ತಂಡ ಹಲ್ಲೆ ನಡೆಸಿದೆ. ಅಜಯ್ ಅಂಚನ್ ಅವರನ್ನು ಸುತ್ತುವರಿದ ತಂಡ ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.