ಇತ್ತೀಚಿನ ಸುದ್ದಿ
Sports | ಚೆಸ್ ಟೂರ್ನಿ; ರಾಷ್ಟ್ರಮಟ್ಟಕ್ಕೆ ತೀರ್ಥಹಳ್ಳಿಯ ಅದಿತಿ ಆಯ್ಕೆ
02/08/2025, 14:43

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರಾಷ್ಟ್ರೀಯ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅದಿತಿ ಪಿ. ಶೆಟ್ಟಿ ಜುಲೈ 29 ಮತ್ತು 30ರಂದು ಬೆಂಗಳೂರಿನ ಗ್ರೀನ್‌ವುಡ್ ಶಾಲೆಯಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಲಯ ಮಟ್ಟದ ಪಂದ್ಯದಲ್ಲಿ ಅದಿತಿ ಪ್ರಥಮ ಸ್ಥಾನ ಪಡೆದಿದ್ದರು. ಇವರನ್ನು ಶಾಲಾ ಆಡಳಿತ ಮಂಡಳಿ,ಪ್ರಾಂಶುಪಾಲರು, ಸಿಬ್ಬಂದಿ ಅಭಿನಂದಿಸಿದ್ದಾರೆ.ಇವರು ಕೋಣಂದೂರಿನ ಎನ್.ಪ್ರಮೋದ್ ಮತ್ತು ಎ.ಅನಿತಾ ದಂಪತಿಯ ಪುತ್ರಿ.