7:17 PM Thursday17 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

Vijayanagara | ಕೂಡ್ಲಿಗಿ ಶ್ರೀ ಕನ್ನಿಕಾ ಪರಮೇಶ್ವರಿಗೆ ವಿಶೇಷ ಅಲಂಕಾರ ಪೂಜೆ: ಪಲ್ಲಕ್ಕಿ ಸೇವೆ, ಭಜನಾರಾಧನೆ

17/07/2025, 16:21

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೃದಯ ಭಾಗದಲ್ಲಿರುವ, ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜು.15ರಂದು ಅಷಾಡ ಮಂಗಳವಾರದಂದು ಶ್ರೀಕನ್ನಿಕಾ ಪರಮೇಶ್ವರಿ ತಾಯಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಪಲ್ಲಕ್ಕಿ ಸೇವೆ ಭಜನಾರಾಧನೆ ಜರುಗಿತು. ಅರ್ಚಕರಾದ ಗುರುಸ್ವಾಮಿರವರ ನೇತೃತ್ವದಲ್ಲಿ , ಶ್ರೀಕನ್ನಿಕಾ ಪರಮೇಶ್ವರಿ ಸೇವಾ ಸಮಿತಿಯವರು. ಆಷಾಢ ಮಾಸದ ಮಂಗಳವಾರದಂದು , ದೇವಿಗೆ ವಿಶೇಷ ಅಲಂಕಾರ ಪೂಜೆ ಪಲ್ಲಕ್ಕಿ ಸೇವೆ ಹಾಗೂ ಭಜನಾರಾಧನೆಯನ್ನು ಸಲ್ಲಿಸಿದರು. ಅಲ್ಲದೇ ಆಷಾಡ ಮಾಸದ ಮಂಗಳವಾರದ ಪ್ರಯುಕ್ತ , ಪಟ್ಟಣದ ವಿವಿದ ದೇವಸ್ಥಾನಗಳಲ್ಲಿನ ದೇವರಿಗೆ ವಿಶೇಷ ಆರಾಧನೆ ಸೇವೆ ಸಲ್ಲಿಸಲಾಯಿತು. ಪಟ್ಟಣದ ಆರಾಧ್ಯ ದೇವ ಗ್ರಾಮ ದೇವತೆ ಶ್ರೀಊರಮ್ಮ ದೇವಿ , ಶ್ರೀಕೊತ್ತಲಾಂಜನೇಯ , ಶ್ರಿವೆಂಕಟೇಶ್ವರ , ಶ್ರೀಕೊತ್ತಲಾಂಜನೇಯ , ಶ್ರೀಸೊಲ್ಲಮ್ಮದೇವಿ ಯ ವಿಶೇಷ ಪೂಜೆ ಹಾಗೂ ಆರಾಧನೆ ಜರುಗಿಸಲಾಯಿತು. ಆಷಾಢ ಮಾಸದಲ್ಲಿ ಈ ರೀತಿ ವಿಶೇಷ ಪೂಜೆಯನ್ನು ಮಾಡುವುದರಿಂದ , ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಹಾಗೂ ಅವರು ಎಲ್ಲಾ ಬಗೆಯ ಫಲಗಳನ್ನು , ದ್ವಿಗುಣವಾಗಿ ಪಡೆಯುವ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ.


ಆಷಾಢ ಮಾಸದಲ್ಲಿ ಶ್ರೀಕನ್ನಿಕಾ ಪರಮೇಶ್ವರಿ ಮತ್ತು ಮಂಗಲ ದೇವರಿಗೆ , ವಿಶೇಷ ಅಲಂಕಾರ ಪೂಜೆ ಭಜನೆ ಪಲ್ಲಕ್ಕಿ ಸೇವೆ ಸಲ್ಲಿಸುವುದರ ಜೊತೆಗೆ, ವೆಂಕಟೇಶ್ವರ, ಸೂರ್ಯ ದೇವ, ದುರ್ಗಾ ಮತ್ತು ಲಕ್ಷ್ಮಿದೇವಿಯರ. ಮತ್ತು ಆಂಜನೇಯನನ್ನು ಪೂಜಿಸುವುದು , ಭಕ್ತರಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಪ್ರತಿ ಮಂಗಳವಾರದಂದು ಶ್ರೀಕನ್ನಿಕಾ ಪರಮೇಶ್ವರಿ , ಹಾಗೂ ಹನುಮಂತನ ದೇವಸ್ಥಾನಕ್ಕೆ ತರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ವಿಶೇಷ ಫಲಗಳು ದೊರಕಲಿವೆ ಎಂದು ಹೇಳಲಾಗುತ್ತದೆ. ದೇವರ ಸನ್ನಿಧಾನದಲ್ಲಿ ದೇವರ ಮಂತ್ರಗಳ ಪಠನೆ ಭಜನಾರಾಧನೆ ಸೇವೆ ಮಾಡುವುದರಿಂದ , ಶ್ರಿಕನ್ನಿಕಾ ಪರಮೇಶ್ವರಿ ಹಾಗೂ ಮಂಗಳ ದೇವರಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ. ಸಕಲ ಕಷ್ಟಗಳಿಂದ ಮುಕ್ತಿ , ಹಾಗೂ ಇಷ್ಟಾರ್ಥಗಳು ಸಿದ್ಧಿಸಿ ಲಭಿಸುವುದೆಂದು ಆಧ್ಯಾತ್ಮ ಚಿಂತಕರು ತಿಳಿಸಿದ್ದಾರೆ. ಆಷಾಢ ಮಾಸದಲ್ಲಿ ಇಷ್ಟ ದೇವ ಕುಲ ದೇವ ಗ್ರಾಮ ದೇವರ ಆರಾಧನೆಯಿಂದ, ಜೀವನದಲ್ಲಿ ಎದುರಾಗುವ ಕಷ್ಟಗಳು ದೂರವಾಗುತ್ತವೆ ಮತ್ತು ಸಕಲ ಭಾಗ್ಯಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳಲಾಗುತ್ತದೆ. ಅಂತೆಯೇ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ , ಆಷಾಢ ಮಂಗಳವಾರದಂದು ಪಟ್ಟಣದ ಆರ್ಯ ವೈಷ್ಯ ಸಂಘದವರು. ಶ್ರೀಕನ್ನಿಕಾ ಪರಮೇಶ್ವರಿ ದೇವರ ಸೇವಾ ಸಮಿತಿಯವರು , ದೇವಿಗೆ ವಿಶೇಷ ಅಲಂಕಾರ ಪಲ್ಲಕ್ಕಿ ಸೇವೆ ಭಜನಾರಾಧನೆ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆರ್ಯ ವೈಷ್ಯ ಸಮಾಜದ ನೂರಾರು ಮಹಿಳೆಯರು , ನೂರಾರು ಯುವಕರು ಹಿರಿಯರು ಶ್ರೀಕನ್ನಿಕಾದೇವಿಯ ಆರಾಧನೆ ಸೇವೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು