12:44 PM Tuesday1 - July 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:… ಸಿದ್ದರಾಮಯ್ಯರಿಗೆ ಅಂಬೇಡ್ಕರ್ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ: ಬಸವರಾಜ ಬೊಮ್ಮಾಯಿ… Mandya | ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆ: ಹ ಕೆಆರ್ ಎಸ್…

ಇತ್ತೀಚಿನ ಸುದ್ದಿ

ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ವೃದ್ಧ 6 ತಿಂಗಳ ಬಳಿಕ ಪತ್ತೆ!: ಕಡೂರು ಸಮೀಪದ ಮನೆಗೆ ವಾಪಸ್!!

09/06/2025, 14:44

ಸಂತೋಷ್ ಅತ್ತಿಗೆರೆ
ಚಿಕ್ಕಮಗಳೂರು
info.reporterkarnataka@gmail.com

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದ ವೇಳೆ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ವೃದ್ದರೊಬ್ಬರು 6 ತಿಂಗಳ ಬಳಿಕ ಪತ್ತೆಯಾಗಿದ್ದಾರೆ.
ಕಡೂರು ತಾಲೂಕಿನ ತಂಗಲಿ ಗ್ರಾಮದ ನರಸಿಂಹಮೂರ್ತಿ ಎಂಬವರು ಕುಂಭಮೇಳದ ವೇಳೆ ನಾಪತ್ತೆಯಾಗಿ, ಇದೀಗ ಪತ್ತೆಯಾದವರು.
ಜನವರಿ 28ರಂದು ನರಸಿಂಹಮೂರ್ತಿ ಅವರು
ಪ್ರಯಾಗ್ ರಾಜ್ ನಲ್ಲಿ ನಾಪತ್ತೆಯಾಗಿದ್ದರು. ಅವರು
ತಂಗಲಿ ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕರಾಗಿದ್ದರು. ಪುತ್ರ ಬದರೀನಾಥ್ ಜೊತೆ ಕುಟುಂಬ ಸಮೇತ ಕುಂಭ ಮೇಳಕ್ಕೆ ಹೋಗಿದ್ದರು‌. ಅಲ್ಲಿ ನಾಪತ್ತೆಯಾಗಿದ್ದರು. 3-4 ದಿನ ಹುಡುಕಿದ ಪುತ್ರ ಬದರೀನಾಥ್ ಕುಟುಂಬದೊಂದಿಗೆ ಊರಿಗೆ ವಾಪಸ್ಸಾಗಿದ್ದರು. ಕುಟುಂಬವನ್ನು ಊರಲ್ಲಿ ಬಿಟ್ಟು ಮತ್ತೆ ಹೋಗಿ ಹುಡುಕಿದ್ದರೂ ಸಿಕ್ಕಿರಲಿಲ್ಲ.
6 ತಿಂಗಳ ಬಳಿಕ ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮನೆಗೆ ವಾಪಸ್ ಬಂದಿದ್ದಾರೆ. ನರಸಿಂಹ ಮೂರ್ತಿಯವರು
ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್ ಸಂಸ್ಥೆಯ ಆಶ್ರಯದಲ್ಲಿದ್ದರು. ಶಾರದಾ ಸಂಸ್ಥೆಯವರೇ ಕರೆತಂದು ನರಸಿಂಹಮೂರ್ತಿಯನ್ನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು