9:35 PM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಬಿಲಾವಲ್ ಭುಟ್ಟೋ ಟೀಕೆಗೆ ತೇಜಸ್ವಿ ಸೂರ್ಯ ತಿರುಗೇಟು: ಪಾಕಿಸ್ತಾನದ ಭಯೋತ್ಪಾದನಾ ದಾಖಲೆಯನ್ನು ಎತ್ತಿಹಿಡಿದ ಸಂಸದ

06/06/2025, 12:32

ವಾಷಿಂಗ್ಟನ್ ಡಿಸಿ(reporterkarnataka.com): ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಯುಎನ್ ಪ್ರಧಾನ ಕಚೇರಿಯಲ್ಲಿ ನೀಡಿರುವ ಹೇಳಿಕೆಗಳಿಗೆ ಸಂಸದ ತೇಜಸ್ವಿ ಸೂರ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಭುಟ್ಟೋ ಅವರ ಹೇಳಿಕೆಯು “ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ” ಎಂದು ಸೂರ್ಯ ಖಂಡಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯ, ಭುಟ್ಟೋ ಅವರು ವಿಶ್ವಸಂಸ್ಥೆಯಂತಹ ಪ್ರಮುಖ ವೇದಿಕೆಯಲ್ಲಿ ಪಾಕಿಸ್ತಾನವನ್ನು ಮತ್ತೆ ‘ಸಂತ್ರಸ್ತರಂತೆ ‘ ಬಿಂಬಿಸಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭುಟ್ಟೋ ಈ ಕೆಳಕಂಡಂತೆ ಹೇಳಿದ್ದು, “ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಶಾಂತಿಗೆ ಇರುವ ಏಕೈಕ ಕಾರ್ಯಸಾಧ್ಯ ಮಾರ್ಗವಾಗಿದೆ. ಶಾಂತಿಯನ್ನು ಸಾಧಿಸಲು ನಮಗೆ ಸಹಾಯ ಮಾಡುವಂತೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ ಮತ್ತು ನನ್ನ ದೇಶದ ಬಹುಪಾಲು ಜನರು ಶಾಂತಿಯನ್ನು ಬಯಸುತ್ತಾರೆ.” ಎಂದು ಹೇಳಿಕೆ ನೀಡಿದ್ದು,
ಭುಟ್ಟೋಗೆ ಉತ್ತರಿಸಿದ ಸೂರ್ಯ, “ಭುಟ್ಟೋ ತಮ್ಮ ನಿಯೋಗವನ್ನು ಶಾಂತಿ ನಿಯೋಗ ಎಂದು ಕರೆದಿದ್ದಾರೆ, ಮತ್ತು ಪಾಕಿಸ್ತಾನಿ ನಿಯೋಗ ಶಾಂತಿಯ ಭಾಷೆಯನ್ನು ಮಾತನಾಡುವುದು ವಿಪರ್ಯಾಸ. “ಸೋತ ಜನರಲ್‌ಗಳನ್ನು ಫೀಲ್ಡ್ ಮಾರ್ಷಲ್‌ಗಳಾಗಿ ಬಡ್ತಿ ನೀಡುವ ಮೂಲಕ ನಕಲಿ ನಾಯಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ದೇಶಕ್ಕೆ ನಿಜವಾದ ನಾಯಕರು ಹೇಗಿರುತ್ತಾರೆಂದು ತಿಳಿದಿಲ್ಲ.”
ಸೂರ್ಯ ಅವರು ಪಾಕಿಸ್ತಾನವನ್ನು ಭಯೋತ್ಪಾದನೆಯ ಅತಿದೊಡ್ಡ ಜಾಗತಿಕ ರಫ್ತುದಾರ ಎಂದು ಕರೆದಿದ್ದು, ಜಾಗತಿಕವಾಗಿ ಪಟ್ಟಿ ಮಾಡಲಾದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಅದು ಸುರಕ್ಷಿತ ಆಶ್ರಯ ನೀಡುತ್ತಿರುವುದನ್ನು ಎತ್ತಿ ಹೇಳಿದರು. “ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಕೇಂದ್ರವಾಗಿದ್ದು, ವಿಶ್ವಾದ್ಯಂತ ನಡೆದ ಅನೇಕ ದಾಳಿಗಳಲ್ಲಿ ಭಾಗಿಯಾಗಿದೆ.ಇದೇ ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್‌ನನ್ನು ಆಶ್ರಯಿಸಿತು, ರಮ್ಜಿ ಯೂಸೆಫ್, ಡೇವಿಡ್ ಹೆಡ್ಲಿ, ಅಬಿದ್ ನಜೀರ್, ಮತ್ತು ಸೈಯದ್ ಫಾರೂಕ್‌ನಂತಹ ಭಯೋತ್ಪಾದಕರನ್ನು ಸೃಷ್ಟಿಸಿತು, ಮತ್ತು ಜಾಗತಿಕವಾಗಿ ಭಯೋತ್ಪಾದನೆಯನ್ನು ತರಬೇತಿ, ಧನಸಹಾಯ ಮತ್ತು ರಫ್ತು ಮಾಡುವುದನ್ನು ಮುಂದುವರೆಸಿದೆ.”
ಪಾಕಿಸ್ತಾನದ ಕ್ರಮಗಳನ್ನು ಭಾರತದ ಜಾಗತಿಕ ನಾಯಕತ್ವದೊಂದಿಗೆ ಸೂರ್ಯ ಹೋಲಿಸಿದರು, ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಅಜಯ್ ಬಂಗಾ, ಮತ್ತು ಇಂದ್ರ ನೂಯಿಯಂತಹ ವ್ಯಕ್ತಿಗಳ ಉದಾಹರಣೆ ನೀಡುವ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಅಂತರದ ಬಗ್ಗೆ ವಿವರಿಸಿ, “ಪಾಕಿಸ್ತಾನವು ನಕಲಿ ಜನರಲ್‌ಗಳನ್ನು ಅಲಂಕರಿಸಿದರೆ, ಭಾರತವು ಜಾಗತಿಕ ನಾಯಕತ್ವದ ಮಾದರಿಗಳಿಂದ ಪ್ರತಿನಿಧಿಸಲ್ಪಟ್ಟಿದೆ
“ನಮ್ಮ ನಿಯೋಗದ ಭೇಟಿಯ ಸಮಯದಲ್ಲಿ ನಡೆದ ಪ್ರತಿಯೊಂದು ಸಭೆಯಲ್ಲಿ, ಪಾಕಿಸ್ತಾನದ ಸುಳ್ಳುಗಳಿಗೆ ಶೂನ್ಯ ಸಹಾನುಭೂತಿ, ಭಾರತದ ಆತ್ಮರಕ್ಷಣೆಯ ಹಕ್ಕಿಗೆ ಜಾಗತಿಕ ಬೆಂಬಲ ಸಿಕ್ಕಿದ್ದನ್ನು ಸೂರ್ಯ ವಿವರಿಸಿದ್ದು ಗಮನಾರ್ಹ.
ಮುಂದುವರೆದಂತೆ “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ, ಭಾರತ ಎಂದಿಗೂ ಮೌನವಾಗಿರುವುದಿಲ್ಲ. ಭಯೋತ್ಪಾದನೆಗೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಲಾಗುವುದು. ಪಾಕಿಸ್ತಾನದ PR ಗಿಮಿಕ್‌ಗಳು ಪಾಕಿಸ್ತಾನದ ರಕ್ತಸಿಕ್ತ ದಾಖಲೆಯನ್ನು ಅಳಿಸುವುದಿಲ್ಲ. ಜಗತ್ತು ಈ ಸುಳ್ಳುಗಳನ್ನು ನೋಡುತ್ತಿದೆ.” ಎಂದು ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು