3:34 AM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

New Delhi | ಗ್ಯಾರೆಂಟಿ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಲಹುವ ಸರ್ಕಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

03/06/2025, 20:38

ನವದೆಹಲಿ(reporterkarnataka.com): ರಾಜ್ಯ ಕಾಂಗ್ರೆಸ್‌ ಸರ್ಕಾರ, ಗ್ಯಾರೆಂಟಿ ನೆಪದಲ್ಲಿ ತನ್ನ ಕಾರ್ಯಕರ್ತರನ್ನು ಸಲಹುತ್ತಿದೆ ಅಷ್ಟೇ! ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಮೂರು ತಿಂಗಳಿಂದಲೂ ಮಹಿಳೆಯರಿಗೆ ʼಗೃಹಲಕ್ಷ್ಮಿʼ ಹಣ ನೀಡಿಲ್ಲ. ಆದರೆ, ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಮಾತ್ರ 3 ತಿಂಗಳ ಮುಂಗಡ ಭತ್ಯೆ ಬಿಡುಗಡೆಗೆ ಆದೇಶಿಸಿದೆ ಎಂದು ಆರೋಪಿಸಿದ್ದಾರೆ.

*ಕಾಂಗ್ರೆಸ್ಸಿಗರಿಗೆ ʼಗೃಹಲಕ್ಷ್ಮಿʼ ವರ:* ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಸ್ಕೀಂಗಳು ಆ ಪಕ್ಷದ ಕಾರ್ಯಕರ್ತರಿಗೆ ಆದಾಯದ ಮೂಲವಾಗಿವೆ. ʼಗೃಹಲಕ್ಷ್ಮಿʼ ನಿಜಕ್ಕೂ ಆ ಪಕ್ಷದವರಿಗೆ ವರದಾನವಾಗಿದೆ, ವರಮಾನ ತರುವ ಯೋಜನೆಯಾಗಿದೆ ಎಂದಿದ್ದಾರೆ.

*ಅನುಷ್ಠಾನ ಸಮಿತಿಗೆ ಮುಂಗಡ ಸಂಬಳವೇ?:* ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬರುವ ಮುನ್ನ ʼಮಹಿಳೆಯರಿಗೆ ಪ್ರತಿ ತಿಂಗಳು ₹2,000 ಟಕಾಟಕ್ ಹಾಕೇಬಿಡ್ತೀವಿʼ ಎಂದರು. ಆದರೆ, ಮೂರ್ನಾಲ್ಕು ತಿಂಗಳುಗಟ್ಟಲೇ ಹಾಕದೆ ಸತಾಯಿಸುತ್ತಿದೆ. ಪ್ರಶ್ನಿಸಿದರೆ ಅದೇನು ಸಂಬಳವೇ? ಎನ್ನುತ್ತಾರೆ. ಹಾಗಾದರೆ ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಕೊಡುತ್ತಿರುವುದೇನು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

*ಗ್ಯಾರೆಂಟಿ ಸಮಿತಿಗೇಕೆ ಮುಂಗಡ ಭತ್ಯೆ?:* ಮಹಿಳೆಯರಿಗೆ ಪ್ರತಿ ತಿಂಗಳು ಕೊಡಲು ಹಣವಿಲ್ಲ. ಆದರೆ, ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಒಟ್ಟಿಗೇ 5 ತಿಂಗಳು (3 ತಿಂಗಳು ಮುಂಗಡ) ಭತ್ಯೆಯಾಗಿ ₹7.65 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ ಜನರಿಗೆ ಮಾತ್ರ ಆಗಸ ತೋರಿಸಿ ಮಂಕುಬೂದಿ‌ ಎರಚುತ್ತಿದೆ ಎಂದು ಆರೋಪಿಸಿದ್ದಾರೆ.

ಸಚಿವ‌ ಸತೀಶ್ ಜಾರಕಿಹೊಳಿ ʼಪ್ರತಿ ತಿಂಗಳು ‌ಗೃಹಲಕ್ಷ್ಮಿ ಹಣ ಕೊಡದಿದ್ರೆ ಆಕಾಶ ಏನೂ ಕಳಚಿ ಬೀಳಲ್ಲ’ ಎಂಬ ದುರಹಂಕಾರದ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಅದೇನು ಸಂಬಳವೇ? ಎಂದು ಪ್ರತಿಕ್ರಿಯಿಸಿದರು. ಹಾಗಾದರೆ ಗ್ಯಾರೆಂಟಿ ಸಮಿತಿಯಲ್ಲಿರುವ ಕಾಂಗ್ರೆಸ್‌ ಮುಖಂಡರಿಗೆ, ಕಾರ್ಯಕರ್ತರಿಗೆ ಮುಂಗಡ ಭತ್ಯೆಗೆ ಆದೇಶ ಕೊಟ್ಟಿದ್ದಾರಲ್ಲ ಇದೇನು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

*₹ 7200 ಕೋಟಿ ಬಾಕಿ:* ರಾಜ್ಯದ 1.25 ಕೋಟಿ ಮಹಿಳೆಯರಿಗೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಸಂದಾಯವಾಗಿಲ್ಲ. ಅಂದಾಜು ₹7200 ಕೋಟಿ ಹಣ ಬಿಡುಗಡೆ ಬಾಕಿ ಉಳಿಸಿಕೊಂಡಿದೆ. ಖಜಾನೆ ಪೂರ್ತಿ ಖಾಲಿ ಮಾಡಿದೆ ಎಂದು ಜೋಶಿ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಶ್ರೀಸಾಮಾನ್ಯರನ್ನು ಕಡೆಗಣಿಸಿದ್ದು, ತನ್ನ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮುಂಗಡ ಭತ್ಯೆ ನೀಡಿ ಅವರನ್ನು ಸಲಹುತ್ತಿದೆ. ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು